ಬಳ್ಳಾರಿ ಜಿಲ್ಲೆಯಿಂದ 10 ಕಿಮಿ ದೂರದಲ್ಲಿರುವ ಸಂಡೂರಿನಲ್ಲಿ ಕುಮಾರಸ್ವಾಮಿ ದೇವಾಲಯವಿದೆ. ಈ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಇದು ಪಾರ್ವತಿದೇವಿ ಹಾಗೂ ಅವಳ ಮಗ ಕಾರ್ತಿಕೇಯನ ಮೊದಲ ವಾಸಸ್ಥಾನ ಎಂಬ ನಂಬುಗೆ ಕೂಡ ಇದೆ.
ವಾಸ್ತುಶೈಲಿಯ ವಿಷಯದಲ್ಲಿ ಕಲಾ ಇತಿಹಾಸಕಾರರು ಏಳು ಎಂಟನೇ ಶತಮಾನದಲ್ಲಿ ನಿರ್ಮಾಣವಾದ ಪಾರ್ವತಿ ದೇವಸ್ಥಾನವನ್ನು ಹೆಚ್ಚು ವಿಶಿಷ್ಟವಾದುದು ಎಂದು ವಿವರಿಸುತ್ತಾರೆ.
ಇಲ್ಲಿನ ಕುಮಾರಸ್ವಾಮಿ ದೇವಾಲಯ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಯಿತು. ರಾಷ್ಟ್ರಕೂಟರ ಕಾಲದಲ್ಲಿ ಗದಾಧರ ಎಂಬವರು ದೇವಸ್ಥಾನವನ್ನು ಕಟ್ಟಿಸಿ ಸ್ಕಂದ ಮೂರ್ತಿಯನ್ನು ನಿರ್ಮಿಸಿ ಪ್ರತಿಷ್ಠಾಪನೆ ಮಾಡಿದರೆಂಬ ಉಲ್ಲೇಖ ಇಲ್ಲಿನ ಶಾಸನವೊಂದರಲ್ಲಿದೆ.
ಕುಮಾರಸ್ವಾಮಿ ದೇವಸ್ಥಾನಕ್ಕೆ ಸಂಡೂರಿನಿಂದ ಬಸ್ ವ್ಯವಸ್ಥೆ ಇದೆ. ಊಟ ಉಪಹಾರದ ವ್ಯವಸ್ಥೆ ಮಾಡಿಯೇ ಪ್ರಯಾಣ ಮಾಡುವುದು ಒಳ್ಳೆಯದು.