alex Certify 20ಕ್ಕೆ ಯಜಮಾನಿಕೆ ಬರಬಾರದು, 70ಕ್ಕೆ ಅದೇನೋ ಇರಬಾರದು ಎನ್ನುವ ಮೂಲಕ ತಮ್ಮನಿಗೆ ಕುಮಾರ್‌ ಬಂಗಾರಪ್ಪ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20ಕ್ಕೆ ಯಜಮಾನಿಕೆ ಬರಬಾರದು, 70ಕ್ಕೆ ಅದೇನೋ ಇರಬಾರದು ಎನ್ನುವ ಮೂಲಕ ತಮ್ಮನಿಗೆ ಕುಮಾರ್‌ ಬಂಗಾರಪ್ಪ ಟಾಂಗ್

Madhu bangarappa slams kumar bangarappa

ಚುನಾವಣೆ ಎಂಬುದು ಕುರುಕ್ಷೇತ್ರ. ಇಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಎಂಬ ಬೇಧವಿಲ್ಲ. ಅವರನ್ನೇ ಎದುರಿಸಬೇಕಾದುದು ಅನಿವಾರ್ಯ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.

ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧು ಬಂಗಾರಪ್ಪ ನನ್ನ ತಮ್ಮ, ಗೀತಾ ನನ್ನ ಸಹೋದರಿ. ಶಿವರಾಜ್ ಕುಮಾರ್ ನನ್ನ ಭಾವ ಎಂಬುದು ನಿಜ. ಆದರೆ, ಚುನಾವಣೆ ಎಂಬ ಕಣದಲ್ಲಿ ಈ ಭಾವನೆಗಳು ಇರುವುದಿಲ್ಲ. ಮುಖ್ಯವಾಗಿ ನನ್ನ ತಮ್ಮ ಎಂದು ನಾನು ಅಂದುಕೊಳ್ಳುತ್ತೇನೆ. ಆದರೆ ಆತ ದ್ವೇಷದ ರಾಜಕಾರಣ ಮಾಡುತ್ತಿದ್ದಾನೆ. ಒಂದು ಕುಟುಂಬವನ್ನು ಪ್ರೀತಿಸದವನು ರಾಜ್ಯದ ಜನರನ್ನು ಹೇಗೆ ಪ್ರೀತಿಸುತ್ತಾನೆ ಎಂದು ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಗೀತಾ ಶಿವರಾಜ್ ಕುಮಾರ್ ಓಟು ಕೂಡ ಇಲ್ಲಿ ಇಲ್ಲ. ಇಂತಹ ಕಾಲದಲ್ಲೂ ಅವರು ತಮ್ಮ ಓಟನ್ನು ಸೊರಬಕ್ಕೆ ವರ್ಗಾಯಿಸಿಕೊಳ್ಳಬಹುದಿತ್ತು. ಅದೇ ಪ್ರತಿ ಬಾರಿಯೂ ಅಲ್ಲೇ ಓಟು ಹಾಕಿ ಬರುತ್ತಾರೆ. ಕಾದು ನೋಡಿ, ಗೀತಾ ಅವರು ಮೇ 7 ರಂದು ಅಥವಾ ಜೂನ್ 4ರಂದು ಮನೆಯನ್ನು ಖಾಲಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಜಕುಮಾರ್ ಅವರ ಹೆಸರನ್ನು ಶಿವರಾಜ್ ಕುಮಾರ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರಿಗೂ ಚುನಾವಣೆಗೆ ನಿಲ್ಲುವ ಆಸೆ ಇತ್ತು ಎಂದು ಸುಳ್ಳು ಹೇಳುತ್ತಾರೆ. ಅವರ ಹೆಸರನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುವುದು ಎಷ್ಟು ಸರಿ. ರಾಜ್ ಕುಮಾರ್ ಮಾಡಿದ್ದು ಕಲಾಸೇವೆ. ಇವರು ಮಾಡುತ್ತಿರುವುದು ಏನು? ಶಿವರಾಜ್ ಕುಮಾರ್ ಅವರು ನನಗೆ ಇಡೀ ಚಿತ್ರರಂಗವೇ ನನ್ನ ಪರ ಇದೇ ಎಂದು ಹೇಳುತ್ತಾರೆ. ಆದರೆ ಅಲ್ಲಿರುವವರು ಕೆಲವರು ಮಾತ್ರ. ನಟ, ನಟಿಯರು ಪ್ರಚಾರ ಮಾಡಿದರೆ ಓಟು ಬರುತ್ತದೆ ಎನ್ನುವುದು ಸುಳ್ಳು. ಶಿವರಾಜ್ ಕುಮಾರ್ ಬೀದಿಯಲ್ಲಿ ಡ್ಯಾನ್ಸ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹರಿಹಾಯ್ದರು.

ಮಧು ಅವರ ಬಗ್ಗೆ ಈಗಾಗಲೇ ಈ ಹಿಂದೆಯೇ ಸಾಕಷ್ಟು ಹೇಳಿದ್ದೇನೆ. ಚೆಕ್ ಬೌನ್ಸ್ ಪ್ರಕರಣ, ಶರಾವತಿ ಡೆಂಟಲ್ ಕಾಲೇಜ್ ಹಗರಣ ಇವೆಲ್ಲವೂ ಆತನನ್ನು ಸುತ್ತಿಕೊಂಡಿವೆ. ದುರಹಂಕಾರವೇ ಆತನ ಆಸ್ತಿ. ಉರಿಯುವವನು ಒಂದು ದಿನ ಬೂದಿಯಾಗುತ್ತಾನೆ. ಇಲ್ಲವೇ ಆವಿಯಾಗಿ ಬಿಡುತ್ತಾನೆ. 20ಕ್ಕೆ ಅವನಿಗೆ ನಮ್ಮ ತಂದೆ ಯಜಮಾನಿಕೆ ಕೊಟ್ಟು ಬಿಟ್ಟರು. ಆಗ ನಾನು ಬ್ಯುಸಿಯಾಗಿದ್ದೆ. ಆ ಸೊಕ್ಕು ಅವನಲ್ಲಿದೆ. 20ಕ್ಕೆ ಯಜಮಾನಿಕೆ ಬರಬಾರದು, 70ಕ್ಕೆ ಅದೇನೋ ಇರಬಾರದು ಎಂಬ ಗಾದೆಯಂತೆ ಅವನಿದ್ದಾನೆ. ಅವನು ಪಿಯುಸಿಗೆ ವಿದ್ಯಾಭ್ಯಾಸ ಮುಗಿಸಿದವನು. ಅಂತಹವನಿಗೆ ಶಿಕ್ಷಣ ಸಚಿವ ಸ್ಥಾನ ಹೇಗೇ ಕೊಟ್ಟರೋ ಎಂದರು..

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...