ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಡಿಸೆಂಬರ್ 10 ರಿಂದ 24ರ ವರೆಗೆ ನಡೆಯಲಿದೆ. ಡಿಸೆಂಬರ್ 18ರಂದು ಬೆಳಿಗ್ಗೆ ವೈಭವದ ಷಷ್ಠಿ ಉತ್ಸವ, ಬ್ರಹ್ಮರಥೋತ್ಸವ ನಡೆಯಲಿದೆ.
ಡಿಸೆಂಬರ್ 10 ರಂದು ಕಾರ್ತಿಕ ಬಹುಳ ದ್ವಾದಶಿ ದಿನದಂದು ಕೊಪ್ಪರಿಗೆ ಏರುವುದರೊಂದಿಗೆ ಸಂಭ್ರಮದ ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ಡಿಸೆಂಬರ್ 12 ರಂದು ಲಕ್ಷ ದೀಪೋತ್ಸವ, ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಲಿದೆ.
ಡಿಸೆಂಬರ್ 12ರಂದು ಸಂಜೆ 7 ಗಂಟೆಗೆ ಭಜನಾ ಸಂಭ್ರಮದಲ್ಲಿ ಖ್ಯಾತ ಗಾಯಕ ಮೈಸೂರು ರಾಮಚಂದ್ರ ಆಚಾರ್ ಮತ್ತು ತಂಡ ಭಾಗವಹಿಸಲಿದೆ. ಚಂಪಾ ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಡಿಸೆಂಬರ್ 24ರ ವರೆಗೆ ಸರ್ಪ ಸಂಸ್ಕಾರ ಇರುವುದಿಲ್ಲ. ಡಿಸೆಂಬರ್ 10 ರಿಂದ 24ರ ವರೆಗೆ ಸಂಜೆ ನಡೆಯುವ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಲಕ್ಷ ದೀಪೋತ್ಸವ ಚೌತಿ, ಪಂಚಮಿ, ಷಷ್ಠಿ ದಿನಗಳಲ್ಲಿ ಭಕ್ತಾದಿಗಳಿಗೆ ರಾತ್ರಿ ಹೊತ್ತಿನ ಪ್ರಾರ್ಥನೆ ಸೇವೆ ಇರುವುದಿಲ್ಲ.