ರಘುರಾಮ್ ಚರಣ್ ಆಕ್ಷನ್ ಕಟ್ ಹೇಳಿರುವ ‘ಕುಬುಸ’ ಚಿತ್ರದ ವಿಡಿಯೋ ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದ್ದು, ನಟ ದುನಿಯಾ ವಿಜಯ್ ಅವರ ಕೈಯಲ್ಲಿ ಈ ಹಾಡನ್ನು ಲಾಂಚ್ ಮಾಡಿಸಲಾಗಿದೆ. ‘ಅರೆರೆ ಅರೆರೆ ತಂಗಾಳಿಯ’ ಎಂಬ ಈ ಹಾಡಿಗೆ ವಾಸುಕಿ ವೈಭವ್ ಧ್ವನಿಯಾಗಿದ್ದು, ಪ್ರದೀಪ್ ಚಂದ್ರ ಅವರ ಸಂಗೀತ ಹಾಗೂ ಸಾಹಿತ್ಯವಿದೆ.
ಈ ಚಿತ್ರದಲ್ಲಿ ನಟರಾಜ ಎಸ್ ಭಟ್ ಸೇರಿದಂತೆ ಮಹಾಲಕ್ಷ್ಮಿ, ಮಂಜಮ್ಮ ಜೋಗತಿ, ಹನುಮಕ್ಕ, ಅನಿಕಾ ರಮ್ಯಾ, ಮಂಜು ಗೌಡ , ಹುಲಿಗೆಪ್ಪ ಕಟ್ಟಿಮನಿ. ತೆರೆ ಹಂಚಿಕೊಂಡಿದ್ದು, ವಿ ಶೋಭಾ ತಮ್ಮ ವಿ ಶೋಭಾ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮಾ ಛಾಯಾಗ್ರಾಹಣ, ಹಾಗೂ ರಘುರಾಮ್ ಚರಣ್ ಸಾಹಸ ನಿರ್ದೇಶನವಿದೆ.