alex Certify ಪಡ್ಡೆ ಹುಡುಗರು ಮಾತ್ರವಲ್ಲ, ಟಿಪ್‌ಟಾಪ್‌ ನೌಕರರ ನಿತ್ಯ ಬಳಕೆಗೂ ಸಿದ್ಧ ಈ ’ಸ್ಪೋರ್ಟ್ಸ್ ಬೈಕ್‌’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡ್ಡೆ ಹುಡುಗರು ಮಾತ್ರವಲ್ಲ, ಟಿಪ್‌ಟಾಪ್‌ ನೌಕರರ ನಿತ್ಯ ಬಳಕೆಗೂ ಸಿದ್ಧ ಈ ’ಸ್ಪೋರ್ಟ್ಸ್ ಬೈಕ್‌’

ಪಡ್ಡೆಹುಡುಗರು, ವೇಗಪ್ರಿಯರ ಪಾಲಿಗೆ ಮಾತ್ರವೇ ಎಂಬಂತಾಗಿದ್ದ ಬಜಾಜ್‌ ಕೆಟಿಎಂ ಸ್ಪೋರ್ಟ್ಸ್ ಬೈಕ್‌ಗಳು, ಇನ್ಮುಂದೆ ಸಭ್ಯ, ಟಿಪ್‌ಟಾಪ್‌ ನೌಕರರು ಕೂಡ ಚಲಾಯಿಸುವಂತಾಗಲಿದೆ. ಯಾಕೆಂದರೆ, ಅತಿವೇಗ ಇಷ್ಟಪಡದವರಿಗಾಗಿಯೇ ಕಂಪನಿಯು 125 ಆರ್‌ಸಿ ಮತ್ತು 200 ಆರ್‌ಸಿ ಎಂಬ ಎರಡು ಹೊಸ ಮಾಡೆಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಮುಂದಿನ ತಿಂಗಳಿಂದ ಈ ಬೈಕ್‌ಗಳು ಕೆಟಿಎಂ ಷೋರೂಮ್‌ನಲ್ಲಿ ಖರೀದಿಗೆ ಲಭ್ಯವಾಗಲಿವೆ.

ಅಂದಹಾಗೆ, ಆರ್‌ಸಿ 125 ಮಾದರಿ ಬೈಕ್‌ನ ಷೋರೂಮ್‌ ಬೆಲೆ 1.82 ಲಕ್ಷ ರೂ. ಮತ್ತು ಆರ್‌ಸಿ 200 ಮಾದರಿಯ ಬೆಲೆ 2.09 ಲಕ್ಷ ರೂ.ಗಳು ಮಾತ್ರ. ಇವು ಜೆನರೇಷನ್‌-2 ವೈಶಿಷ್ಟ್ಯತೆಯ ಬೈಕ್‌ಗಳಾಗಿದ್ದು, ಸಂಪೂರ್ಣ ಹೊಸ ಚಾಸಿಸ್‌ ಹೊಂದಿವೆ. ಬಹಳ ಹಗುರವಾದ ಟೈರ್‌ಗಳು, ಬ್ರೇಕ್ಸ್‌ಗಳನ್ನು ಅಳವಡಿಸಲಾಗಿದೆ. ಕೇವಲ ರೇಸ್‌ಗಳಲ್ಲಿ ಓಡಿಸುವ ಬದಲಿಗೆ ದಿನನಿತ್ಯದ ಬಳಕೆಗೂ ಸೂಕ್ತವಾಗುವ ರೀತಿಯಲ್ಲಿ ಕಾಳಜಿಯಿಂದ ವಿನ್ಯಾಸಗೊಳಿಸಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ.

ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದ CSK ನಾಯಕ ಧೋನಿ, 300 ಪಂದ್ಯಗಳಲ್ಲಿ ನಾಯಕನಾದ ಮೊದಲಿಗ

13.7 ಲೀಟರ್‌ ಸಾಮರ್ಥ್ಯ‌ದ ಟ್ಯಾಂಕ್‌, 4 ಸ್ಟ್ರೋಕ್‌ ಇಂಜಿನ್‌, ಎಲ್‌ಸಿಡಿ ಡ್ಯಾಷ್‌ ಪರದೆ, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಮರು ವಿನ್ಯಾಸಗೊಂಡಿರುವ ರೇಡಿಯೇಟರ್‌ಗಳು ಗಾಡಿಯು ಶೀಘ್ರ ಕೂಲ್‌ ಆಗಲು ಸಹಕರಿಸುತ್ತವೆ ಎನ್ನುವುದು ಈ ಮಾಡೆಲ್‌ಗಳ ವೈಶಿಷ್ಟ್ಯತೆಯಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಕೆಟಿಎಂ ಆರ್‌ಸಿ-390 ಮಾಡೆಲ್‌ ಬೈಕ್‌ ಕೂಡ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...