ಬೆಂಗಳೂರು: ಟಿಕೆಟ್ ರಹಿತ ಪ್ರಯಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್.ಆರ್.ಟಿ.ಸಿ ಒಂಂದೇ ತಿಂಗಳಲ್ಲಿ 6.54 ಲಕ್ಷ ದಂಡದ ಹಣ ಸಂಗ್ರಹಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದಾಯ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೊಳ್ಳಲು ಮುಂದಾಗಿದ್ದು, ಮೇ ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಪ್ರಕರಣದಲ್ಲಿ ರಾಜ್ಯಾದ್ಯಂತ 6.54 ಲಕ್ಷ ದಂಡ ಸಂಗ್ರಹಿಸಿದೆ.
ಕರ್ನಾಟಕ ಹಾಗೂ ನೆರೆ ರಾಜ್ಯಗಳಲ್ಲಿ ಸಂಚರಿಸುವ 42,680 ಬಸ್ ಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ 3,708 ಕಳ್ಳತನ ಪ್ರಕರಣ ಪತ್ತೆಯಾಗಿದೆ. 3,754 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಸಿಬ್ಬಂದಿಗಳಿಗೆ 88,429 ರೂ ದಂಡ ಹಾಕಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ತಿಳಿಸಿದೆ. ಸಂದಂಡ ಸಂಗ್ರಹದಿಂದಾಗಿಯೇ ಕೆ.ಎಸ್.ಆರ್.ಟಿ.ಸಿ ಖಜಾನೆಗೆ ಲಕ್ಷ ಲಕ್ಷ ರೂಪಾಯಿ ಸೇರ್ಪಡೆಯಾದಂತಾಗಿದೆ.