ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣದರ ಹೆಚ್ಚಳ ಮಾಡುವಂತೆ ನಾಲ್ಕು ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೇಕಡ 15 ರಿಂದ 20ರಷ್ಟು ಪ್ರಯಾಣದ ಹೆಚ್ಚಿಸಬೇಕೆಂಬುದು ನಿಗಮಗಳ ಮನವಿಯಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
2010ರಲ್ಲಿ ಬಿಎಂಟಿಸಿ ಪ್ರಯಾಣದರ ಹೆಚ್ಚಳ ಮಾಡಲಾಗಿತ್ತು. ಉಳಿದ ಮೂರು ನಿಗಮಗಳಲ್ಲಿ ದರ ಹೆಚ್ಚಳ ಮಾಡಿ ಐದು ವರ್ಷ ಕಳೆದಿದೆ. ಡೀಸೆಲ್, ಬಿಡಭಾಗಗಳ ದರ ಹೆಚ್ಚಳ, ನೌಕರರ ವೇತನ ಏರಿಕೆಯಾಗಿದ್ದು, ಹೊರೆಯಾಗಿರುವುದರಿಂದ ನಿಗಮಗಳು ಬಸ್ ಪ್ರಯಾಣದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಮುಖ್ಯಮಂತ್ರಿಗಳು ಒಪ್ಪಿದರೆ ದರ ಹೆಚ್ಚಳ ಜಾರಿಗೆ ಬರಲಿದೆ. ನಿಗಮಗಳ ಮನವಿಯನ್ನು ಸರ್ಕಾರ ನಿರ್ಧರಿಸಬೇಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.