ಬೆಂಗಳೂರು: ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು 15% ರಷ್ಟು ಹೆಚ್ಚಳ ಮಾಡಲಾಗಿದೆ.
ಸಾರಿಗೆ ಇಲಾಖೆಯಿಂದ ಶನಿವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೊಳಿಸಲಾಗಿದೆ. ವೇಗದೂತ, ರಾಜಹಂಸ, ವೋಲ್ವೋ, ವೋಲ್ವೋ ಮಲ್ಟಿ ಆಕ್ಸೆಲ್, ಐರಾವತ, ಎಸಿ ಸ್ಲಿಪ್ಪರ್, ನಾನ್ ಎಸಿ ಸೇರಿದಂತೆ ಎಲ್ಲಾ ಬಸ್ ಗಳ ಪ್ರಯಾಣ ದರ ಶೇಕಡ 15ರಷ್ಟು ಹೆಚ್ಚಳವಾಗಿದ್ದು, ಎಸಿ ಬಸ್ ಗಳಲ್ಲಿ ಸಂಚರಿಸುವರು ಪರಿಷ್ಕೃತ ದರದೊಂದಿಗೆ ಜಿಎಸ್ಟಿ ಕೂಡ ಪಾವತಿಸಬೇಕಿದೆ.
ವೇಗದೂತ ಬಸ್ ಗಳ ಪರಿಷ್ಕೃತ ಪ್ರಯಾಣದರ ಕನಿಷ್ಠ 11 ರೂ. ನಿಂದ ಗರಿಷ್ಠ 115 ರೂ.ವರೆಗೆ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.