ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ ಆರ್ಥಿಕ ಸಂಕಷ್ಟ ನಿವಾರಿಸಲು ಪ್ರಯಾಣ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆದಿದೆ.
ಸರ್ಕಾರದಿಂದ ಸಂಕ್ರಾಂತಿ ವೇಳೆಗೆ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರು ಜನವರಿ 15ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಯುವ ಸಭೆಯಲ್ಲಿ ಪ್ರಯಾಣದರ ಹೆಚ್ಚಳ ಕುರಿತು ಪ್ರಸ್ತಾಪಪಿಸುವ ಸಾಧ್ಯತೆ ಇದೆ.
ದಿನದಿಂದ ದಿನಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೇಕಡ 15ರಷ್ಟು ದರ ಏರಿಕೆಗೆ ಒತ್ತಾಯವಿದ್ದು, ಶೇಕಡ 12ರಷ್ಟು ಹೆಚ್ಚಳ ಮಾಡುವ ಸಂಭವವಿದೆ.
ಬಿಎಂಟಿಸಿಯಲ್ಲಿ 10 ವರ್ಷ, ಉಳಿದ ನಿಗಮಗಳಲ್ಲಿ 5 ವರ್ಷದ ಹಿಂದೆ ದರ ಹೆಚ್ಚಳ ಮಾಡಲಾಗಿದೆ. ಬಿಎಂಟಿಸಿ ದರ ಹೆಚ್ಚಳ ಮಾಡಿದಾಗ ಡೀಸೆಲ್ ದರ 55 ರೂಪಾಯಿ ಇತ್ತು. ಉಳಿದ ನಿಗಮಗಳಲ್ಲಿ ದರ ಏರಿಕೆ ಮಾಡಿದಾಗ ಡೀಸೆಲ್ ದರ 75 ರೂ. ಇತ್ತು. ಈಗ ಡೀಸೆಲ್ ದರ 89 ರೂಪಾಯಿ ಇದ್ದು, ನಿತ್ಯವೂ 4 ಕೋಟಿ ರೂಪಾಯಿಯಷ್ಟು ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಕ್ರಾಂತಿ ವೇಳೆಗೆ ಬಸ್ ಪ್ರಯಾಣದ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.