
ಬೆಂಗಳೂರು: ಕೆಎಸ್ಆರ್ಟಿಸಿ ರಾಜಹಂಸ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಎಸಿ, ಮತ್ತು ನಾನ್ ಎಸಿ ಬಸ್ ಗಳ ಪ್ರಯಾಣದರವನ್ನು ವೀಕೆಂಡ್ ನಲ್ಲಿ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ.
ಐಷಾರಾಮಿ ಬಸ್ ಗಳ ಪ್ರಯಾಣ ದರ ಏಕ ರೂಪದಲ್ಲಿ ಇರುತ್ತದೆ. ವಾರಾಂತ್ಯದ ದಿನಗಳಲ್ಲಿ ದರ ಏರಿಕೆ ಮಾಡುವುದಿಲ್ಲ. ವಾರಂತ್ಯ ದಿನಗಳಂದು ಶೇಕಡ 10 ರಷ್ಟು ಹೆಚ್ಚುವರಿ ಪ್ರಯಾಣದರ ನೀಡಬೇಕಿತ್ತು. ಜನವರಿ 15 ರಿಂದ 31 ರವರೆಗೆ ವಾರದ ಎಲ್ಲಾ ದಿನಗಳಲ್ಲಿ ಏಕರೂಪದ ಪ್ರಯಾಣ ದರ ನಿಗದಿಪಡಿಸಲಾಗಿದೆ. ವಾರಾಂತ್ಯ ದರ ಇರುವುದಿಲ್ಲ. ಸಾಮಾನ್ಯ ದರದಲ್ಲಿಯೇ ಪ್ರಯಾಣಿಸಬಹುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.