ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸದ್ಯದಲ್ಲೇ ಮಲ್ಟಿ ಎಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸಂಚಾರ ಆರಂಭಿಸುತ್ತಿದ್ದು, ಇದರ ಮಧ್ಯೆ ನೂತನ ವಾಹನಗಳಿಗೆ ಹೆಸರು – ಬ್ರಾಂಡ್ ಸೂಚಿಸಲು ಕೋರಲಾಗಿದೆ.
ಸಾರ್ವಜನಿಕರು ಹಾಗೂ ಪ್ರಯಾಣಿಕರು, ಬ್ರಾಂಡ್ ಹೆಸರು ಟ್ಯಾಗ್ಲೈನ್ ಹಾಗೂ ಗ್ರಾಫಿಕ್ಸ್ ಕಳುಹಿಸಿಕೊಡಬಹುದಾಗಿದ್ದು, ಪ್ರತಿ ಮಾದರಿಯ ಉತ್ತಮ ಬ್ರಾಂಡ್ ಹೆಸರು ಸೂಚಿಸಿದವರಿಗೆ 10,000 ನಗದು ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ 25,000 ನಗದು ಬಹುಮಾನ ನೀಡಲಾಗುತ್ತದೆ.
ಹೆಸರನ್ನು ಸೂಚಿಸಲು ಡಿಸೆಂಬರ್ 5 ಅಂತಿಮ ದಿನಾಂಕವಾಗಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ತಮ್ಮ ಬ್ರಾಂಡ್ ಐಡಿಯಾಗಳನ್ನು cpro@ksrtc.org ಇ ಮೇಲ್ ಅಥವಾ KSRTC ಅಧಿಕೃತ ಫೇಸ್ ಬುಕ್ / ಟ್ವಿಟರ್ ಖಾತೆಗೆ ಸಲ್ಲಿಸಬಹುದಾಗಿದೆ.