alex Certify ʻKSRTCʼ ಸಿಬ್ಬಂದಿಗಳ ಗಮನಕ್ಕೆ : ನಿಮಗೆ ಸಿಗಲಿರುವ ಯೋಜನೆ, ಸೌಲಭ್ಯಗಳ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʻKSRTCʼ ಸಿಬ್ಬಂದಿಗಳ ಗಮನಕ್ಕೆ : ನಿಮಗೆ ಸಿಗಲಿರುವ ಯೋಜನೆ, ಸೌಲಭ್ಯಗಳ ಕುರಿತು ಇಲ್ಲಿದೆ ಮಾಹಿತಿ

ಬೆಂಗಳೂರು : ಕೆ ಎಸ್ ಆರ್ ಟಿ ಸಿ ಯು 2024 ನೇ ವರ್ಷವನ್ನು “ಪ್ರಯಾಣಿಕ ಸ್ನೇಹಿ ವರ್ಷ” ವೆಂದು ಘೋಷಣೆ ಮಾಡಿದೆ. ನಿಗಮವು 2023 ನೇ ವರ್ಷವನ್ನು “ಕಾರ್ಮಿಕ ಕಲ್ಯಾಣ ವರ್ಷ” ಎಂದು ಘೋಷಿಸಿ, ಈ ಕೆಳಕಂಡ ಕಾರ್ಮಿಕಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ.

  • ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು “ವಿದ್ಯಾ ಚೇತನ ಯೋಜನೆ’ ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ.
  • ತನ್ನ ಸಿಬ್ಬಂದಿಗಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ.

ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.

  • ಈಗಾಗಲೇ ನೌಕರರ ಮೇಲಿನ 10364 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪ್ರಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ.
  • ಕೇಂದ್ರ ಕಛೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ ನಿರ್ದೇಶಕರು : (ಸಿ&ಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ.
  • ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ.
  • ನಿಗಮಗಳಿಗೆ ಸ್ನಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ.

. ಅಂತರ ವಿಭಾಗ/ ಘಟಕಗಳಿಗೆ 900 ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ.

  • ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತರಹಿತ ಚಾಲನೆಯ ಕುರಿತು ಕಾರ್ಯಾಗಾರ/ಉಪನ್ಯಾಸಗಳ ಆಯೋಜನೆ ಹಾಗೂ 65 ಹೊಸ ಬೊಲೆರೋ ಜೀಪುಗಳನ್ನು ವಿಭಾಗಗಳಿಗೆ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಹಾಗೂ ಮುಂಜಾಗ್ರತಾ ಕ್ರಮವಹಿಸಲಾಗಿದೆ.
  • ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿಗಳನ್ನು ಪಾವತಿಸಲಾಗುವುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...