ಕಾರವಾರ: ಪ್ರತಿ ಜಿಲ್ಲೆಯಲ್ಲಿ 5 ಸಿ.ಎನ್.ಜಿ. ಬಸ್ ಗಳ ಪ್ರಾಯೋಗಿಕ ಸಂಚಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಕುಮಟಾದ ಆವಾರದಲ್ಲಿ ಸಾರಿಗೆ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗೆ ಪ್ರತಿದಿನ ಡೀಸೆಲ್ ಗೆ 3 ಕೋಟಿ ರೂಪಾಯಿಯಷ್ಟು ಖರ್ಚಾಗುತ್ತಿದೆ. ಡೀಸೆಲ್ ಹೊರೆ ತಪ್ಪಿಸಲು ಸಿ.ಎನ್.ಜಿ. ಬಸ್ ಸಂಚಾರ ಆರಂಭಿಸಲಿದ್ದು, ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯಲ್ಲಿ ಐದು ಬಸ್ ಗಳ ಸಂಚಾರ ಆರಂಭಿಸಲು ಚಿಂತನೆ ನಡೆದಿದೆ ಎಂದರು.
ರಾಜ್ಯದ ಸಾರಿಗೆ ನಿಗಮದ ನಾಲ್ಕು ವಿಭಾಗಗಳಲ್ಲಿ 45,000 ಬಸ್ ಗಳಿದ್ದು, ಹಳೆಯ ಬಸ್ ಗಳನ್ನು ಬದಲಿಸಿ ಎಲೆಕ್ಟ್ರಿಕ್ ಬಸ್ ಗಳನ್ನು ಬಳಸಲಾಗುವುದು. ಮೆಕಾನಿಕ್ ವಿಭಾಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗುವುದು. ಪ್ರಯಾಣಿಕರ ಹಿತದೃಷ್ಟಿಯಿಂದ 4 -5 ಸಾವಿರ ಹೊಸ ಬಸ್ ಖರೀದಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.