ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು 2024ನ್ನು ಪ್ರಯಾಣಿಕ ಸ್ನೇಹಿ ವರ್ಷ ಎಂದು ಘೋಷಿಸಿದೆ.
ಪ್ರತಿವರ್ಷವನ್ನು ಒಂದೊಂದು ಉದ್ದೇಶ ಇಟ್ಟುಕೊಂಡು ಕೆಎಸ್ಆರ್ಟಿಸಿ ಸೇವೆ ನೀಡುತ್ತಿದೆ. 2023 ರಲ್ಲಿ ಕಾರ್ಮಿಕ ಕಲ್ಯಾಣ ವರ್ಷ ಎಂದು ಘೋಷಿಸಿ ಹಲವು ಯೋಜನೆ ಜಾರಿಗೊಳಿಸಲಾಗಿತ್ತು. 2024 ಪ್ರಯಾಣಿಕ ಸ್ನೇಹಿ ವರ್ಷ ಎಂದು ಘೋಷಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳ ಜಾರಿಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
ಜನವರಿ 1ರಿಂದ ಅನ್ವಯವಾಗುವಂತೆ ಅಪಘಾತ ಪರಿಹಾರ ಮೊತ್ತವನ್ನು ಮೂರು ಲಕ್ಷದಿಂದ 10 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.. ಪ್ರಸಕ್ತ ಸಾಲಿನಲ್ಲಿ ಅಂಬಾರಿ ಉತ್ಸವ, ಐರಾವತ ಕ್ಲಬ್ ಕ್ಲಾಸ್, ಪಲ್ಲಕ್ಕಿ, ಎಲೆಕ್ಟ್ರಿಕ್ ಹಾಗೂ ಸಾಮಾನ್ಯ ಸಾರಿಗೆ ಬಸ್ ಗಳು ಸೇರಿದಂತೆ 2,000 ಬಸ್ ಗಳನ್ನು ನಿಗಮಕ್ಕೆ ಸೇರ್ಪಡೆ ಮಾಡಲಾಗುತ್ತದೆ. ನಮ್ಮ ಕಾರ್ಗೋ ಟ್ರಕ್ ಸೇವೆಯನ್ನು 20 ಟ್ರಕ್ ಗಳಿಂದ 500 ಟ್ರಕ್ ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ.