ಬೆಂಗಳೂರು: ಶಕ್ತಿ ಯೋಜನೆ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ 1,200ಕ್ಕೂ ಅಧಿಕ ಹೊಸ ಬಸ್ ಗಳ ಖರೀದಿಗೆ ಸರ್ಕಾರ ಕ್ರಮ ಕೈಗೊಂಡಿದ್ದು, 4 ನಿಗಮಗಳಿಗೆ ಬಸ್ ಖರೀದಿಗೆ 500 ಕೋಟಿ ರೂ. ಅನುದಾನ ನೀಡಲಾಗಿದೆ.
ರಾಜ್ಯ ಸರ್ಕಾರದ ವಿಶೇಷ ಬಂಡವಾಳ ನೆರವಿನ ಅಡಿಯಲ್ಲಿ ಸಾರಿಗೆ ಸಂಸ್ಥೆಗಳ ನಾಲ್ಕು ನಿಗಮಗಳಿಗೆ ಹೊಸ ಬಸ್ ಖರೀದಿಗೆ ಅನುದಾನ ಕಲ್ಪಿಸಲಾಗಿದೆ. ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ನಿಗಮಗಳಲ್ಲಿ ಬಸ್ ಇಲ್ಲದೆ ಸಮರ್ಪಕವಾಗಿ ಸೇವೆ ನೀಡಲು ಸಾಧ್ಯವಾಗದ ಕಾರಣ ಹೊಸ ಬಸ್ ಖರೀದಿಗೆ ಅನುದಾನ ನೀಡಲಾಗಿದೆ.
ಬಿಎಂಟಿಸಿಗೆ 150 ಕೋಟಿ ರೂ., ವಾಯುವ್ಯ ಕರ್ನಾಟಕ ಸಾರಿಗೆಗೆ 150 ಕೋಟಿ ರೂ., ಕೆಎಸ್ಆರ್ಟಿಸಿಗೆ 100 ಕೋಟಿ ರೂ. ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ನಾಲ್ಕು ನಿಗಮಗಳಿಗೆ 1200ಕ್ಕೂ ಹೆಚ್ಚು ಬಸ್ ಗಳು ಸೇರ್ಪಡೆಯಾಗಲಿವೆ.