ಮೈಸೂರು: ದಸರಾ ಮಹೋತ್ಸವ 2021 ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸಿಗರ ಅನೂಕೂಲಕ್ಕಾಗಿ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಪ್ಯಾಕೇಜ್ ಟೂರ್‌ಗಳ ವ್ಯವಸ್ಥೆಯನ್ನು ಅ 9 ರಿಂದ 24 ರವರೆಗೆ ಕಲ್ಪಿಸಲಾಗಿದೆ.
ಗಿರಿ ದರ್ಶಿನಿ:- ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30ಕ್ಕೆ ನಿರ್ಗಮಿಸಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟ ಸೇರಿದಂತೆ ಒಟ್ಟು 325 ಕಿ.ಮೀ ಸಂಚರಿಸಲಿದೆ. ಪ್ಯಾಕೇಜ್ ಟೂರ್ ದರ ದೊಡ್ಡವರಿಗೆ-350, ಮಕ್ಕಳಿಗೆ-175 ರೂ. ಆಗಿರುತ್ತದೆ.
ಜಲ ದರ್ಶಿನಿ:- ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30ಕ್ಕೆ ನಿರ್ಗಮಿಸಿ ಗೋಲ್ಡನ್ ಟೆಂಪಲ್, ನಿಸರ್ಗಧಾಮ, ದುಬಾರೆ ಅರಣ್ಯ, ಚಿಕ್ಲಿಹೊಳೆ ಡ್ಯಾಂ, ರಾಜಸೀಟ್, ಅಭಿ ಜಲಪಾತ, ಹಾರಂಗಿ ಜಲಾಶಯ, ಕೆ.ಆರ್.ಎಸ್ 350 ಕಿ.ಮೀ. ಸಂಚರಿಸಲಿದೆ. ಪ್ಯಾಕೇಜ್ ಟೂರ್ ದರ ದೊಡ್ಡವರಿಗೆ-400 ಮಕ್ಕಳಿಗೆ-200 ರೂ. ಆಗಿರುತ್ತದೆ.
ದೇವ ದರ್ಶಿನಿ:- ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30ಕ್ಕೆ ನಿರ್ಗಮಿಸಿ ನಂಜನಗೂಡು, ತಲಕಾಡು, ಬ್ಲಫ್, ಮೂಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆ.ಆರ್.ಎಸ್. 250 ಕಿ.ಮೀ. ಸಂಚರಿಸಲಿದೆ. ಪ್ಯಾಕೇಜ್ ಟೂರ್ ದರ ದೊಡ್ಡವರಿಗೆ-275, ಮಕ್ಕಳಿಗೆ-140ರೂ. ಆಗಿರುತ್ತದೆ.
ಪ್ಯಾಕೇಜ್ ಟೂರ್‌ಗಳಿಗೆ ಪ್ರಯಾಣಿಕರಿಗೆ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ನಿಗಮದ ಮೈಸೂರು ಕೇಂದ್ರಿಯ ಬಸ್ ನಿಲ್ದಾಣ ಮತ್ತು ಕೆ.ಎಸ್.ಆರ್.ಟಿ.ಸಿ ಖಾಸಗಿ ಅವತಾರ್ ಬುಕ್ಕಿಂಗ್ ಕೌಂಟರ್ ಹಾಗೂ ಆನ್‌ಲೈನ್(www.ksrtc.in)) ಮುಖಾಂತರ ಮುಂಗಡ ಆಸನ ಕಾಯ್ದಿರಿಸಬಹುದು ಎಂದು ಮೈಸೂರು(ಗ್ರಾ) ವಿಭಾಗ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.