ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಹಣವನ್ನು ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಬಿಡುಗಡೆ ಮಾಡಿದೆ.
ಜೂನ್ ತಿಂಗಳಲ್ಲಿ 248 ಕೋಟಿ ರೂಪಾಯಿ ಟಿಕೆಟ್ ನೀಡಿದ್ದು, 125 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೆಎಸ್ಆರ್ಟಿಸಿ ಒಟ್ಟು ಟಿಕೆಟ್ ಮೌಲ್ಯ 92.73 ಕೋಟಿ ರೂ. ಆಗಿದ್ದು, 47.15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಬಿಎಂಟಿಸಿಗೆ 43.64 ಕೋಟಿ ರೂಪಾಯಿ ಆಗಿದ್ದು, 21.85 ಕೋಟಿ ರೂ. ನೀಡಲಾಗಿದೆ. ವಾಯುವ್ಯಸಾರಿಗೆ 64.99 ಕೋಟಿ ರೂ. ಆಗಿದ್ದು, 32.57 ಕೋಟಿ ರೂ. ನೀಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ 46.92 ಕೋಟಿ ರೂ. ಆಗಿದ್ದು, 23.9 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 248.30 ಕೋಟಿ ರೂ. ಟಿಕೆಟ್ ನೀಡಿದ್ದು, 125.48 ಕೋಟಿ ರೂ. ನೀಡಲಾಗಿದೆ.
ಜೂನ್ 11 ರಿಂದ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಅದರ ಮೊತ್ತವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಲಿದೆ. ಜೂನ್ 11 ರಿಂದ ಯೋಜನೆ ಆರಂಭವಾಗಿದ್ದು, ಆಗಸ್ಟ್ 1ರವರೆಗೆ 719 ಕೋಟಿ ರೂ. ಉಚಿತ ಪ್ರಯಾಣದ ಟಿಕೆಟ್ ನೀಡಲಾಗಿದೆ.