ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎಸ್ಆರ್ಟಿಸಿ ಹೆಸರನ್ನು ಇನ್ಮುಂದೆ ಕರ್ನಾಟಕ ಬಳಸುವಂತಿಲ್ಲ. ಕೇರಳ ಕೆಎಸ್ಆರ್ಟಿಸಿ ಹೆಸರನ್ನು ಬಳಸಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಟ್ರೇಡ್ಮಾರ್ಕ್ ರಿಜಿಸ್ಟ್ರಿ ಈ ಬಗ್ಗೆ ಆದೇಶ ಹೊರಡಿಸಿದ್ದು, 27 ವರ್ಷಗಳ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ.
ಕೆಎಸ್ಆರ್ಟಿಸಿ ಹೆಸರನ್ನು ಇನ್ನು ಮುಂದೆ ಕೇರಳ ಬಳಸಬೇಕಿದೆ. ಕರ್ನಾಟಕ ಬಳಸುವಂತಿಲ್ಲ. ಕೇರಳ 1965 ರಿಂದಲೇ ಕೆಎಸ್ಆರ್ಟಿಸಿ ಬಳಸುತ್ತಿದೆ. ಕರ್ನಾಟಕ ಸರ್ಕಾರ 1973 ರಿಂದ ಕೆಎಸ್ಆರ್ಟಿಸಿ ಬಳಸುತ್ತಿದ್ದು, ನಾವು ಮೊದಲು ಬಳಸಿರುವುದರಿಂದ ನಮಗೆ ಕೆಎಸ್ಆರ್ಟಿಸಿ ಕೊಡಬೇಕೆಂದು ಸುದೀರ್ಘ 27 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಲಾಗಿತ್ತು. ಕೊನೆಗೆ ಕೆಎಸ್ಆರ್ಟಿಸಿ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಕೇರಳ ಸರ್ಕಾರಕ್ಕೆ ಕೆಎಸ್ಆರ್ಟಿಸಿ ಸಿಕ್ಕಿದೆ.