ಬೆಂಗಳೂರು: ಕೆಎಸ್ಆರ್ಟಿಸಿ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕೆಎಸ್ಆರ್ಟಿಸಿ ನೌಕರರಿಗೆ ಇನ್ನು ಮುಂದೆ ಒಂದು ಕೋಟಿ ರೂಪಾಯಿ ಅಪಘಾತ ವಿಮೆ ಸಿಗಲಿದೆ.
ದೀಪಾವಳಿ ವೇಳೆ ಕೆಎಸ್‌ಆರ್‌ಟಿಸಿ 50 ಲಕ್ಷ ರೂಪಾಯಿ ಅಪಘಾತ ವಿಮೆ ಜಾರಿಗೊಳಿಸಿದ್ದು, ಇದೀಗ ಮತ್ತೆ 50 ಲಕ್ಷ ರೂ. ಸೇರಿಸಿ ಎಸ್‌ಬಿಐ ಜೊತೆಗೆ ನಿಗಮ ಒಪ್ಪಂದ ಮಾಡಿಕೊಂಡಿದೆ. ಕರ್ತವ್ಯದಲ್ಲಿ ಇಲ್ಲದ ವೇಳೆ ಅಪಘಾತ ಸಂಭವಿಸಿದರೂ ವಿಮೆ ಸೌಲಭ್ಯ ಇರಲಿದೆ.
ಈವರೆಗೆ ಕೆಎಸ್ಆರ್ಟಿಸಿ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ, ಶಾಶ್ವತ, ಭಾಗಶಃ ಅಂಗವಿಕಲವಾದರೆ ದೊಡ್ಡ ಮೊತ್ತದ ಪರಿಹಾರ ಸಿಗುತ್ತಿರಲಿಲ್ಲ. ಅವಲಂಬಿತರಿಗೆ ಅಥವಾ ಅವರಿಗೆ ದೊಡ್ಡ ಮೊತ್ತದ ಪರಿಹಾರ ಸಿಗುತ್ತಿರಲಿಲ್ಲ. ಸಿಬ್ಬಂದಿ ಹಿತಕ್ಕಾಗಿ ನೂತನ ವಿಮಾ ಸೌಲಭ್ಯವನ್ನು ಕೆಎಸ್ಆರ್ಟಿಸಿ ಜಾರಿಗೊಳಿಸಿದೆ.