ಬೆಂಗಳೂರು: ಕೆಎಸ್ಆರ್ಟಿಸಿ ವತಿಯಿಂದ ದಸರಾ ಹಬ್ಬದ ಹೊತ್ತಲ್ಲಿ ನೌಕರರಿಗೆ ಸಿಹಿ ಸುದ್ದಿ ನೀಡಲಾಗಿದೆ. ಗಳಿಕೆ ರಜೆ ನಗದೀಕರಣ ಮೊತ್ತ ಪಾವತಿ ಮಾಡಲಾಗುವುದು ಎಂದು ಹೇಳಲಾಗಿದೆ.
ಕೊರೋನಾದಿಂದ ಸಂಕಷ್ಟ ಎದುರಾಗಿದ್ದ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಗಳಿಕೆ ರಜೆ ನಗರೀಕರಣ ಮೊತ್ತ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಕೆಎಸ್ಆರ್ಟಿಸಿ ಆರ್ಥಿಕವಾಗಿ ಚೇತರಿಕೆ ಹಂತದಲ್ಲಿದ್ದು, ತನ್ನ ನೌಕರರ ಹಬ್ಬದ ಸಂಭ್ರಮ ಹೆಚ್ಚಿಸಲು ತೀರ್ಮಾನಿಸಿದೆ.
2021 -22 ನೇ ಸಾಲಿನ ಗಳಿಕೆ ರಜೆ ನಗದಿಕರಣ ಮೊತ್ತವನ್ನು ಅಕ್ಟೋಬರ್ 3 ರಂದು ಎಲ್ಲಾ ಅರ್ಹ ಸಿಬ್ಬಂದಿಗೆ ಪಾವತಿಸಲಾಗುವುದು ಎಂದು ಕೆಎಸ್ಆರ್ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ ಎಂಡಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.