ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಏಕಾಏಕಿ ಹಂಪ್ ಎಗರಿಸಿದ ಪರಿಣಾಮ ಬಸ್ ನಲ್ಲಿದ್ದ ಕಂಡಕ್ಟರ್ ಮೇಲಕ್ಕೆ ಹಾರಿ ಕೆಳಗೆ ಬಿದ್ದ ಪರಿಣಾಮ ಕಂಡಕ್ಟರ್ ಕಾಲು ಮುರಿದುಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಟ್ಟಿಕೆರೆ ಬಳಿ ನಡೆದಿದೆ.
ಧರ್ಮಸ್ಥಳದಿಂದ ಕೋಲಾರಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಗೊಟ್ಟಿಕೆರೆ ಬಳಿ ಕಂಡಕ್ಟರ್ ಸಂಗಪ್ಪ ಅಕ್ಕಿ ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿದ್ದ. ಈ ವೇಳೆ ಬಸ್ ಚಾಲಕ ಒಮ್ಮೆಲೆ ಹಂಪ್ ಎಗರಿಸಿದ್ದಾರೆ. ಆಯತಪ್ಪಿದ ಕಂಡಕ್ಟರ್ ಕೆಳಗೆ ಬಿದ್ದಿದ್ದು, ಕಾಲು ಮುರಿದಿದೆ, ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ ಚಾಲಕ ಮಹೇಶ್ ಬೇಜವಾಬ್ದಾರಿಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಾಳು ಕಂಡಕ್ಟರ್ ನನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.