ಬೆಂಗಳೂರು: ಬಸ್ ಪ್ರಯಾಣಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರೀಮಿಯಂ ಬಸ್ ಮತ್ತು ಎಲ್ಲಾ ವರ್ಗದ ಬಸ್ ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಪಡೆಯುವ ವಾಹನಗಳ ಮೇಲಿನ ದರವನ್ನು ಇಳಿಕೆ ಮಾಡಲು ಸಾರಿಗೆ ಸಂಸ್ಥೆ ಕ್ರಮಕೈಗೊಂಡಿದೆ.
ಮದುವೆ, ಪ್ರವಾಸ ಇನ್ನಿತರ ಕಾರಣಗಳಿಗಾಗಿ ಎಲ್ಲ ವರ್ಗದ ಬಸ್ ಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಕೆಎಸ್ಆರ್ಟಿಸಿ ಒದಗಿಸುತ್ತಿದ್ದು ಇದಕ್ಕೆ ಉತ್ತೇಜನ ನೀಡಲು ಜನವರಿ 6 ರಿಂದ ಒಪ್ಪಂದದ ದರ ಇಳಿಕೆ ಮಾಡಲಾಗಿದೆ.
ಐರಾವತ ಕ್ಲಬ್ ಕ್ಲಾಸ್ ಬಿಎಸ್ 3 ಬಸ್ ಗಳ ದರಗಳನ್ನು ಪ್ರತಿ ಕಿಲೋಮೀಟರ್ ಗೆ 5 ರೂ.ನಿಂದ 7 ರೂಪಾಯಿಯವರೆಗೆ ಇಳಿಕೆ ಮಾಡಿದ್ದು ದಿನಕ್ಕೆ ಕನಿಷ್ಠ ಮಿತಿಯನ್ನು 500 ರಿಂದ 400 ಕಿಲೋಮೀಟರ್ ಗೆ ನಿಗದಿಪಡಿಸಲಾಗಿದೆ.
ಐರಾವತ ಕ್ಲಬ್ ಕ್ಲಾಸ್(ಬಿಎಸ್ 4) 47 ಆಸನಗಳ ಬಸ್ ಸಾಂದರ್ಭಿಕ ಒಪ್ಪಂದದ ದರವನ್ನು 5 ರೂಪಾಯಿಂದ 10 ರೂಪಾಯಿ ವರೆಗೆ ಇಳಿಕೆ ಮಾಡಲಾಗಿದೆ. ಐರಾವತ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸೆಲ್ 51 ಆಸನಗಳ ಬಸ್ ಸಾಂದರ್ಭಿಕ ಒಪ್ಪಂದದ ದರವನ್ನು ಕಿಲೋಮೀಟರ್ ಗೆ 10 ರೂ. ಇಳಿಕೆ ಮಾಡಲಾಗಿದೆ.
32 ಸೀಟ್ ಗಳ ಎಸಿ ಸ್ಲಿಪ್ಪರ್ ಬಸ್ ನ ಸಾಂದರ್ಭಿಕ ಒಪ್ಪಂದ ದರಗಳನ್ನು ಪ್ರತಿ ಕಿ.ಮೀ.ಗೆ 5 ರಿಂದ 6 ರೂಪಾಯಿವರೆಗೆ ಇಳಿಕೆ ಮಾಡಲಾಗಿದೆ. 40 ಆಸನಗಳ ಫ್ಲೈಬಸ್ ಸಾಂಧರ್ಬಿಕ ಒಪ್ಪಂದ ದರವನ್ನು ಪ್ರತಿ ಕಿಲೋಮೀಟರ್ಗೆ 10 ರಿಂದ 16 ರೂಪಾಯಿವರೆಗೆ ಇಳಿಕೆ ಮಾಡಲಾಗಿದೆ.