![](https://kannadadunia.com/wp-content/uploads/2025/02/bus-.jpg)
ಚಾಮರಾಜನಗರ: 45 ಪ್ರಯಾಣಿಕರಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಲಿಸುತ್ತಿದ್ದಗಲೇ ಬಸ್ ಚಾಲಕ ಏಕಾಏಕಿ ಮೂರ್ಛೇ ಹೊದ ಘಟನೆ ನಡೆದಿದೆ. ಬಸ್ ಓಡಿಸುತ್ತಿದ್ದಾಗಲೇ ಬಸ್ ಚಾಲಕ ಮೂರ್ಛೇ ಹೋಗಿದ್ದು, ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಬಸ್ ಚಾಲಕ ಬಸ್ ಓಡಿಸುತ್ತಲೇ ಮೂರ್ಛೇ ಹೋಗಿದ್ದಾನೆ ಅಡ್ಡಾಡಿದ್ದಿಯಾಗಿ ಓಡಿದ ಬಸ್ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಮುಂಭಾಗದಲ್ಲಿ ಕುಳಿತಿದ್ದ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.