ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರೊಬ್ಬರು ಸಮಯಪ್ರಜ್ಞೆ ಮೆರೆದ ಕಾರಣ ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಈ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ಕಲ್ಲುಕೋಟೆ ಬಳಿ ನಡೆದಿದೆ.
ಶಿರಾ ನಗರದಿಂದ ಪಟ್ಟನಾಯಕನಹಳ್ಳಿ ಕಡೆಗೆ 40ಕ್ಕೂ ಅಧಿಕ ಪ್ರಯಾಣಿಕರು ಹೊತ್ತು ಕೆ.ಎಸ್.ಆರ್.ಟಿ.ಸಿ. ಬಸ್ ಸಾಗುತ್ತಿದ್ದ ವೇಳೆ ಆಕ್ಸೆಲ್ ಬ್ಲೇಡ್ ಕಟ್ಟಾಗಿದೆ. ಈ ವೇಳೆ ವಿಚಲಿತಗೊಳ್ಳದ ಚಾಲಕ ಬಸ್ಸನ್ನು ಸೇತುವೆಗೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ.
ಬಸ್ ಒಂದಷ್ಟು ಮುಂದೆ ಸಾಗಿದ್ದರೂ ಸಹ 20 ಅಡಿ ಆಳದ ಸೇತುವೆಯಿಂದ ಬೀಳುವ ಸಾಧ್ಯತೆ ಇತ್ತಾದರೂ ಸೇತುವೆಗೆ ಡಿಕ್ಕಿ ಹೊಡೆದು ಬಸ್ ನಿಂತ ಪರಿಣಾಮ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.