ಮೈಸೂರು ವಿಶ್ವವಿದ್ಯಾಲಯ ಜುಲೈ 25 ರಂದು ನಡೆಸಿದ್ದ ಕೆ -ಸೆಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 4779 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ.
ರಾಜ್ಯದ 11 ಕೇಂದ್ರಗಳಲ್ಲಿ 41 ವಿಷಯಗಳಿಗೆ ಪರೀಕ್ಷೆ ನಡೆದಿದ್ದು, 83,907 ಮಂದಿ ಅರ್ಜಿ ಸಲ್ಲಿಸಿದ್ದರು. 69,857 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇಕಡ 6.84 ಅಭ್ಯರ್ಥಿಗಳು ಪಾಸಾಗಿದ್ದಾರೆ.
ಒಟ್ಟು 4779 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಪಡೆದುಕೊಂಡಿದ್ದು, ಇವರಲ್ಲಿ 2470 ಪುರುಷರು ಮತ್ತು 2309 ಮಹಿಳೆಯರಿದ್ದಾರೆ. ವಾಣಿಜ್ಯ ವಿಷಯದಲ್ಲಿ 888 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ. ಮುಂದಿನ ಕೆ -ಸೆಟ್ ಪರೀಕ್ಷೆ 2022 ರ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಸಲಾಗುವುದು. ವಿವರಗಳಿಗೆ kset.uni-mysore.ac.in. ಗಮನಿಸಬಹುದಾಗಿದೆ.