ಬೆಂಗಳೂರು: ಕೆ.ಎಸ್.ಡಿ.ಎಲ್. ಅಸಲಿ ಕಹಾನಿ ಬಗೆದಷ್ಟು ಬಯಲಾಗುತ್ತಿದೆ. ಕೆ.ಎಸ್.ಡಿ.ಎಲ್. ನೌಕರರ ಒಕ್ಕೂಟ ನೀಡಿದ ದೂರಿನಲ್ಲಿ ಅಕ್ರಮದ ಬಗ್ಗೆ ಉಲ್ಲೇಖಿಸಲಾಗಿದೆ.
ಕೆ.ಎಸ್.ಡಿ.ಎಲ್. ಅಧ್ಯಕ್ಷರಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ 800 ಕೋಟಿ ರೂ.ಗೂ ಹೆಚ್ಚು ಕಚ್ಚಾ ಸಾಮಗ್ರಿ ಖರೀದಿಸಿದ್ದಾರೆ. ಕೆ.ಎಸ್.ಡಿ.ಎಲ್. ನಿಯಮ ಗಾಳಿಗೆ ತೂರಿ ಕಚ್ಚಾ ಸಾಮಗ್ರಿ ಖರೀದಿಸಿದ್ದರು ಎಂದು ಹೇಳಲಾಗಿದೆ.
ಖರೀದಿ, ದಾಸ್ತಾನು ನಿಯಮ ಉಲ್ಲಂಘಿಸಿ ಅವರು ಕಚ್ಚಾ ಸಾಮಗ್ರಿ ಖರೀದಿಸಿದ್ದರು. ಟೆಂಡರ್ ದಾರರು ಶೇಕಡ 2ರಿಂದ 3ರಷ್ಟು ಹೆಚ್ಚಳಕ್ಕೆ ಅವಕಾಶವಿದೆ. ಆದರೆ, ಕಚ್ಚಾ ಸಾಮಗ್ರಿದರ ಶೇಕಡ 70, 80, 140 ರಷ್ಟು ಹೆಚ್ಚಿಸಿದ್ದರು. ಕಚ್ಚಾ ಸಾಮಗ್ರಿ ದರ ಹೆಚ್ಚಳದ ಬಗ್ಗೆ ನೆಗೋಷಿಯೇಷನ್ ಕಮಿಟಿ ಫೈನಾನ್ಸ್ ಕಮಿಟಿ ಕ್ರಮ ವಹಿಸಿಲ್ಲವೆಂದು ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ಸ್ಯಾಂಡಲ್ವುಡ್ ಆಯಿಲ್ ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಫೆಬ್ರವರಿ 21 ರಂದು ಕೆ.ಎಸ್.ಡಿ.ಎಲ್. ನೌಕರರ ಒಕ್ಕೂಟದಿಂದ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ಶಾಸಕರ ಪುತ್ರ ಮಾಡಾಳ್ ಪ್ರಶಾಂತ್ ರೆಡ್ ಹ್ಯಾಂಡಾಗಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದು, ಅವರ ಕಚೇರಿ, ನಿವಾಸದಿಂದ ಬರೋಬ್ಬರಿ 8 ಕೋಟಿ ರೂ.ಗೂ ಅಧಿಕ ನಗದು ಜಪ್ತಿ ಮಾಡಲಾಗಿದೆ.