alex Certify ಮಿತ್ರಮಂಡಳಿ ಬಿಟ್ಟ ಖಾತೆ ನಾವು ತೆಗೆದುಕೊಳ್ತೇವೆ: ಕೆ.ಎಸ್.​ ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿತ್ರಮಂಡಳಿ ಬಿಟ್ಟ ಖಾತೆ ನಾವು ತೆಗೆದುಕೊಳ್ತೇವೆ: ಕೆ.ಎಸ್.​ ಈಶ್ವರಪ್ಪ

ರಾಜ್ಯ ರಾಜಕೀಯದಲ್ಲಿ ಸದ್ಯ ಖಾತೆ ಹಂಚಿಕೆಯ ಸುದ್ದಿಯೇ ಜೋರಾಗಿದೆ. ನಿರೀಕ್ಷೆಗೆ ತಕ್ಕ ಖಾತೆ ಸಿಗದ ಹಿನ್ನೆಲೆ ಆನಂದ್​​ ಸಿಂಗ್​ ಕೆಂಡವಾಗಿದ್ದಾರೆ. ಈ ವಿಚಾರವಾಗಿ ಚಿಕ್ಕೋಡಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಿತ್ರಮಂಡಳಿ ಶಾಸಕರ ಋಣ ತೀರಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ಹೇಳಿದ್ರು.‌

ಬಿಜೆಪಿ ಸರ್ಕಾರ ಸಂಪುಟ ರಚನೆ ಮಾಡ್ತಿದೆ ಅಂದರೆ ಅದಕ್ಕೆ ಕಾಂಗ್ರೆಸ್​ ಹಾಗೂ ಜೆಡಿಎಸ್​ನಿಂದ ಬಂದ ಶಾಸಕರೇ ಮುಖ್ಯ ಕಾರಣ. ಅವರು ಬಿಜೆಪಿಗೆ ಸೇರ್ಪಡೆಯಾಗದೇ ಹೋಗಿದ್ದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರ್ತಾನೇ ಇರಲಿಲ್ಲ. ಹೀಗಾಗಿ ನಾವು ಅವರ ಋಣವನ್ನು ತೀರಿಸಲೇಬೇಕು. ಅವರಿಗೆ ಸೂಕ್ತ ಮಂತ್ರಿ ಸ್ಥಾನ ನೀಡಿ ಮಿಕ್ಕಿದ್ದನ್ನು ನಾವು ಹಂಚಿಕೊಳ್ಳಬೇಕು. ಆನಂದ್​ ಸಿಂಗ್​ರ ಸಮಸ್ಯೆಯನ್ನು ಸಿಎಂ ಶೀಘ್ರದಲ್ಲೇ ಪರಿಹಾರ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ರು.

ಅವಾಚ್ಯ ಪದ ಬಳಕೆ ವಿಚಾರವಾಗಿ ಕಾಂಗ್ರೆಸ್ಸಿಗರ ಆಕ್ರೋಶದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಹರಿಪ್ರಸಾದ್​ ನನ್ನನ್ನು ಜೋಕರ್​ ಎಂದರು, ಮೋದಿ ಹೆಸರನ್ನು ಸುಲಭ ಶೌಚಾಲಯಕ್ಕೆ ಇಡಬೇಕು ಎಂದರು. ಇದನ್ನು ಕಾಂಗ್ರೆಸ್​ನವರು ಒಪ್ಪುತ್ತಾರೆಯೇ..? ಕಾಂಗ್ರೆಸ್​ ಪ್ರತಿಭಟನೆ ಮಾಡೋದಾದರೆ ಮಾಡಲಿ. ಬೇಡ ಎಂದವರು ಯಾರು..? ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...