
ದಾವಣಗೆರೆ: ಮುಂದಿನ ರಾಜಕಾರಣದ ತಿರುವು ದಾವಣಗೆರೆಯಿಂದಲೇ ಆರಂಭವಾಗಲಿದೆ. ದಾವಣಗೆರೆಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯೊಂದಿಗೆ ರಾಜಕೀಯ ತಿರುವು ಆರಂಭವಾಗಲಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ತರುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ತಿರುವು ನೀಡಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ ಎಂದ ಅವರು, ಜನರು ಆಡಳಿತ ಮಾಡಿ ಎಂದರೂ ಬಹುಮತ ಕೊಡುವುದಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ತಿರುವು ಪಡೆಯಲಿದೆ. ಯಾವ ಪಕ್ಷಕ್ಕೆ ಯಾರ ನಾಯಕತ್ವಕ್ಕೆ ಮತ ಹಾಕಬೇಕು ಎಂಬುದು ಜನರಿಗೆ ಗೊತ್ತಿದೆ ಎಂದರು.