ಶಿವಮೊಗ್ಗ: ಕಾಂಗ್ರೆಸ್ ಎಂದರೆ ಬಲಿದಾನ ಮಾಡಿದವರು ನೆನಪಾಗುತ್ತಾರೆ. ಆದರೆ, ಈಗ ಜೈಲಿಗೆ ಹೋಗಿ ಬಂದವರೆಲ್ಲ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಹೋಗಿದ್ದರು. ರಾಷ್ಟ್ರದ್ರೋಹಿಗಳ ಕೈಯಲ್ಲಿ ಕಾಂಗ್ರೆಸ್ ಪಕ್ಷವಿದೆ ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ನಾಯಕರು ಮುಸ್ಲಿಂ ಗೂಂಡಾಗಳಿಗೆ ಬುದ್ಧಿ ಹೇಳಬೇಕು. ಹಿಂದೂ ಸಮುದಾಯದವರು ದುರ್ಬಲ ಅಲ್ಲ. ಹಿಂದೂ ಸಮಾಜ ಎದ್ದರೆ ಮುಸಲ್ಮಾನ್ ಗೂಂಡಾಗಳು ಉಳಿಯಲ್ಲ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮುಸ್ಲಿಂ ಗೂಂಡಾಗಳು ಅನುಭವಿಸುತ್ತಾರೆ ಎಂದು ಕಿಡಿಕಾರಿದ್ದಾರೆ.