ಬೆಂಗಳೂರು: ಕೇಸರಿ ವಸ್ತ್ರ ಹಿಂದೂ ಸಂಸ್ಕೃತಿಯಲ್ಲಿ ಪಾವಿತ್ರ್ಯತೆ ಹೊಂದಿದೆ. ನಮ್ಮ ಪೂರ್ವಿಕರು ಕೂಡ ಕೇಸರಿ ವಸ್ತ್ರವನ್ನು ಬಳಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬುದು ಬಿಜೆಪಿ, ಆರ್.ಎಸ್.ಎಸ್. ಅಂಗಸಂಸ್ಥೆಗಳ ಮಹದಾಸೆ ಆಗಿದೆ. ಇದರ ಭಾಗವಾಗಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿರಬಹುದು ಎಂದರು.
ಸಚಿವ ಈಶ್ವರಪ್ಪ ಅವರ ಹೇಳಿಕೆ ಖಂಡಿಸಿ ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಒಂದು ದಿನದ ಕಲಾಪಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಈಶ್ವರಪ್ಪರ ಹೇಳಿಕೆ ಖಂಡಿಸಿ ಧರಣಿ ಮಾಡಿ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಇದರಿಂದ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.