ಶಿವಮೊಗ್ಗ: ಕಾಂಗ್ರೆಸ್ ಪಾದಯಾತ್ರೆಯಿಂದ ಕೊರೋನಾ ಹೆಚ್ಚಳವಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮೋಟಮ್ಮ, ಅಜಯ್ ಸಿಂಗ್ ಸೇರಿದಂತೆ ಹಲವರಿಗೆ ಕೊರೊನಾ ಸೋಂಕು ಬಂತು. ಈ ಮೊದಲು ಸೋಂಕು ಬಂದಿರಲಿಲ್ಲ. ಪಾದಯಾತ್ರೆಯಲ್ಲಿ ಭಾಗಿಯಾದ ನಂತರ ಅವರಿಗೆ ಸೋಂಕು ಬಂದಿದೆ ಎಂದರು.
ರಾಜಕಾರಣ ಮಾಡಲು ಹೋಗಿ ಸೋಂಕು ಹರಡಿದೆ. ಎಲ್ಲದಕ್ಕೂ ರಾಜಕಾರಣವನ್ನು ಬೆರೆಸುವುದು ಒಳ್ಳೆಯ ಬೆಳವಣಿಗೆಯಲ್ಲ. ಕಾಂಗ್ರೆಸ್ ಪಾದಯಾತ್ರೆಯಿಂದ ಕೊರೋನಾ ಹೆಚ್ಚಳವಾಗಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರಿಂದ ಕೊರೋನಾ ಬಂದಿದೆ. ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಮಾಡದಂತೆ ಮನವಿ ಮಾಡಿದ್ದೆವು. ರಾಜಕಾರಣ ಮಾಡಲು ಹೋಗಿ ಕೊರೊನಾ ಸೋಂಕು ಹರಡುವಂತಾಯ್ತು. ಎಲ್ಲದಕ್ಕೂ ರಾಜಕಾರಣ ಬೆರೆಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.
ಪಾದಯಾತ್ರೆಗೆ ಹೋಗಿದ್ದಕ್ಕೆ ಕೊರೋನಾ ಸೋಂಕು ಬಂದಿದೆ. ದಯವಿಟ್ಟು ನೀವು ಆರೋಗ್ಯವಾಗಿರಿ. ನಮ್ಮನ್ನೂ ಆರೋಗ್ಯವಾಗಿರಲು ಬಿಡಿ. ಆರೋಗ್ಯದ ದೃಷ್ಟಿಯಿಂದ ಕೊರೋನಾ ಮುಗಿದ ಮೇಲೆ ಪಾದಯಾತ್ರೆ ಮಾಡಿ. ಕಾರ್ಯಕರ್ತರು ಪಾದಯಾತ್ರೆಗೆ ಹೋಗಿ ಬಂದು ತಮ್ಮ ಜಿಲ್ಲೆಗಳಿಗೆ ಹೋದಾಗ ಅಲ್ಲಿಯೂ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಕೊರೋನಾ ಮುಗಿಯುವವರೆಗೂ ರಾಜಕಾರಣ ಬಿಡಿ ಎಂದು ಹೇಳಿದ್ದಾರೆ.