
ಶಿವಮೊಗ್ಗ: ನಗರದಲ್ಲಿ ಇಂದು ಆಟೋ ನಿಲ್ದಾಣ ಉದ್ಘಾಟನೆಗೆ ತೆರಳಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಆಟೋ ಚಾಲನೆ ಮಾಡಿ ಗಮನಸೆಳೆದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ದಿನದಂದು ಆಟೋದಲ್ಲಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ್ದ ಅವರು, ಇಂದು ಆಟೋ ನಿಲ್ದಾಣ ಉದ್ಘಾಟನೆ ಮಾಡಿದ ನಂತರ ಆಟೋ ಚಾಲನೆ ಮಾಡಿದ್ದಾರೆ. ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಬಳಿ ಭಾನುವಾರ ಆಟೋ ನಿಲ್ದಾಣ ಉದ್ಘಾಟನೆ ನೆರವೇರಿಸಿದ ಅವರು ನಂತರ ಎಲೆಕ್ಟ್ರಿಕ್ ಆಟೋ ಚಾಲನೆ ಮಾಡಿದ್ದಾರೆ.