ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸಿಟ್ಟು, ಆವೇಶದಲ್ಲಿ ಮಾತನಾಡಿದ್ದಾರೆ. ಮೋದಿ, ದೇಶ ಎಂದು ಬದುಕು ಕಟ್ಟಿಕೊಂಡ ಅವರು ಬಿಜೆಪಿ ಪರ ಚುನಾವಣೆಯಲ್ಲಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬೆಳೆಸುವಲ್ಲಿ ಈಶ್ವರಪ್ಪನವರ ಪಾತ್ರ ದೊಡ್ಡದಿದೆ. ಅವರ ಪುತ್ರನಿಗೆ ಟಿಕೆಟ್ ತಪ್ಪಲು ಬೇರೆ ಕಾರಣವಿದೆ. ಇವುಗಳನ್ನೆಲ್ಲ ಮಿಶ್ರಣ ಮಾಡಲು ಆಗುವುದಿಲ್ಲ. ಅವರ ಜೊತೆ ಹಿರಿಯರು ಮಾತನಾಡುತ್ತಾರೆ. ಸಮಸ್ಯೆ ಬಗೆಹರಿಯುತ್ತೆ. ನಾನು ಕೂಡ ಅವರ ಮನೆಗೆ ಹೋಗಿದ್ದೆ. ಇಲ್ಲೇ ಇರುವಂತೆ ಹೇಳಿದ್ದೇನೆ ಎಂದರು.
ಈಶ್ವರಪ್ಪ ನಮ್ಮಂತಹ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಅವರು ಪಕ್ಷಕ್ಕೆ ಪರಿಹಾರ ಕೊಡುವವರು. ಪಕ್ಷಕ್ಕೆ ಸಮಸ್ಯೆ ಮಾಡುತ್ತಾರೆ ಅನ್ನಿಸುವುದಿಲ್ಲ. ರಾಜ್ಯ, ರಾಷ್ಟ್ರ ನಾಯಕರು ಈಶ್ವರಪ್ಪನವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.