ಹರಿಹರ: ಶ್ರೀರಾಮ ದಶರಥ ಮಹಾರಾಜರಿಗೆ ಜನಿಸಿಲ್ಲ, ಬದಲಿಗೆ ಪುರೋಹಿತನಿಗೆ ಹುಟ್ಟಿದ್ದು ಎಂದು ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.
ಅಂಬೇಡ್ಕರ್ ಅವರ 133ನೇ, ಪ್ರೊ. ಬಿ. ಕೃಷ್ಣಪ್ಪನವರ 86ನೇ ಜನ್ಮ ದಿನಾಚರಣೆ ಮತ್ತು ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದಶರಥ ಮಹಾರಾಜರಿಗೆ ಶ್ರೀರಾಮ ಜನಿಸಿಲ್ಲ, ಬದಲಾಗಿ ಪುರೋಹಿತನಿಗೆ ಹುಟ್ಟಿದ್ದು. ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ದೇವತೆಗಳಿಂದ. ಈ ಮಾತಿಗೆ ನನ್ನ ಬಳಿ ಪುರಾವೆಗಳಿವೆ ಎಂದು ಹೇಳಿದ್ದಾರೆ.
ರಾಮಾಯಣದ ರಾಮ ದಶರಥ ಮಹಾರಾಜರ ಪುತ್ರ ಎಂಬುದಷ್ಟೇ ತಿಳಿದ ವಿಷಯವಾದರೂ ರಾಮ ದಶರಥ ಮಹಾರಾಜರಿಂದ ಹುಟ್ಟಿಲ್ಲ. ಬದಲಾಗಿ ಪುರೋಹಿತನೊಬ್ಬನಿಂದ ಹುಟ್ಟು ಕಂಡವರು. ಅದೇ ರೀತಿ ಮಹಾಭಾರತದ ಯುಧಿಷ್ಟರ, ಭೀಮ, ಅರ್ಜುನ, ನಕುಲ, ಸಹದೇವರ ತಂದೆ ಕುರು ರಾಜ್ಯದ ರಾಜ ಪಾಂಡು ಎಂದಿದ್ದರೂ ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳ ಅನುಗ್ರಹದಿಂದ ಎಂದು ಭಗವಾನ್ ಹೇಳಿದ್ದಾರೆ.