
ಮೈಸೂರು: ಕೆ.ಆರ್.ಎಸ್ ಗೆ ಬಾಗಿನ ಸಮರ್ಪಣೆ ಬಳಿಕ ಸಂಪ್ರದಾಯ ಮುರಿದು ಕಾವೇರಿ ನಿಗಮದ ಅಧಿಕಾರಿಗಳು ಬಾಡೂಟ ಆಯೋಜನೆ ಮಾಡಿರುವ ಆರೋಪ ಕೇಳಿಬಂದಿದೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಡವಟ್ಟು ಮಾಡಿದ್ದು, ಇದೇ ಮೊದಲ ಬಾರಿಗೆ ಸಂಪ್ರದಾಯವನ್ನು ಮುರಿದು, ಬಾಗಿನ ಅರ್ಪಣೆ ಬಳಿಕ ಭರ್ಜರಿ ಬಾಡೂಟ ಆಯೋಜಿಸಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆ.ಆರ್.ಎಸ್ ನ ಖಾಸಗಿ ಹೋಟೆಲ್ ನಲ್ಲಿ ಅಧಿಕಾರಿಗಳು ಬಾಡೂಟ ಆಯೋಜಿಸಿದ್ದು, ಸಿಎಂ ಸಿದ್ದರಾಮಯ್ಯ, ಸಚಿವರು ಹೊರಟ ಬಳಿಕ ಇತ್ತ ಅಧಿಕಾರಿಗಳು ಬಾಡೂಟದಲ್ಲಿ ಪಾಲ್ಗೊಂಡಿದ್ದಾರೆ.
ಕಾವೇರಿ ನದಿಗೆ ಬಾಗಿನ ಅರ್ಪಿಸಿದ ದಿನ ಈವರೆಗೆ ಎಂದೂ ಬಾಡೂಟ ಆಯೋಜನೆ ಮಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕಾವೇರಿ ನಿಗಮದ ಅಧಿಕಾರಿಗಳು ಬಾಡೂಟ ಆಯೋಜಿಸಿ ಸಂಪ್ರದಾಯವನ್ನು ಮುರಿದಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.