ಮಂಡ್ಯ: ಕೆ.ಆರ್.ಎಸ್. ಜಲಾಶಯದಿಂದ ತಮಿಳುನಾಡಿಗೆ ಬಿಡಲಾಗುತ್ತಿದ್ದ ನೀರನ್ನು ಶುಕ್ರವಾರದಿಂದ ಸ್ಥಗಿತಗೊಳಿಸಲಾಗಿದೆ. ಇನ್ನು 15 ದಿನ ರೈತರ ಬೆಳೆಗಳಿಗೆ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಅನ್ವಯ 15 ಟಿಎಂಸಿ ನೀರನ್ನು ಈ ಹಿಂದೆ ತಮಿಳುನಾಡಿಗೆ ಹರಿಸಲಾಗಿತ್ತು. ಮತ್ತೆ 15 ದಿನಗಳ ಕಾಲ 75,000 ಕ್ಯುಸೆಕ್ ನೀರು ಬಿಡಲು ಪ್ರಾಧಿಕಾರ ಆದೇಶಿಸಿತ್ತು. ಅದರಂತೆ ರೈತರ ತೀವ್ರ ವಿರೋಧದ ನಡುವೆಯೂ ಮಂಗಳವಾರ ಮಧ್ಯರಾತ್ರಿಯಿಂದ ಮತ್ತೆ ನೀರು ಹರಿಸಲಾಗಿತ್ತು. ಇದುವರೆಗೆ 62 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ. ಮಳೆಯಿಂದಾಗಿ ನದಿಯಲ್ಲಿ 13,000 ಕ್ಯಸೆಕ್ ನೀರು ಹರಿಯುತ್ತಿದ್ದು, ಅದು ತಮಿಳುನಾಡು ತಲುಪಿದರೆ ಪ್ರಾಧಿಕಾರ ಆದೇಶಿಸಿದಷ್ಟು ನೀರು ಹರಿಸಿದಂತಾಗುತ್ತದೆ.
ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ಸ್ಥಗಿತಗೊಳಿಸಿದ ನಂತರ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಮುಂದಿನ 15 ದಿನಗಳ ಕಾಲ ರೈತರ ಬೆಳೆಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಕೆ.ಆರ್.ಎಸ್. ಜಲಾಶಯದ ನೀರಿನ ಮಟ್ಟ 98 ಅಡಿಗೆ ಕುಸಿದಿದೆ.