ಮೈಸೂರು: ಕೆ.ಆರ್.ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವುದನ್ನು ವಿರೋಧಿಸಿ ಸ್ಪ್ರಿನ್ಸಸ್ ಸ್ಟಿಕ್ಕರ್ ಅಂಟಿಸಲಾಗಿತ್ತು. ಇದೀಗ ಈ ಸ್ಟಿಕ್ಕರ್ ರಾತ್ರಿ ಬೆಳಗಾಗುವುದರೊಳಗೆ ತೆರವುಗೊಳಿಸಲಾಗಿದೆ.
ಕೆ.ಆರ್.ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ರಸ್ತೆ ಎಂದು ನಾಮಕರಣ ಮಾಡುವ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ನಿನ್ನೆ ಸಂಜೆ ಕೆಲ ಸಂಘಟನೆ ಕಾರ್ಯಕರ್ತರು ರಸ್ತೆಯ ಹಲವು ಭಾಗಗಳಲ್ಲಿ ಪ್ರಿನ್ಸಸ್ ರಸ್ತೀಂದು ಸ್ಟಿಕ್ಕರ್ ಅಂಟಿಸಿದ್ದರು. ಆದರೆ ಈಗ ಈ ಸ್ಟಿಕ್ಕರ್ ನ್ನು ರಾತ್ರೋ ರಾತ್ರಿ ತೆರವು ಮಾಡಲಾಗಿದೆ.
ಪ್ರಿನ್ಸಸ್ ರಸ್ತೆ ಸ್ಟಿಕ್ಕರ್ ತೆರವು ಮಡಿರುವುದು ಯಾರು? ಇದು ಕೂಡ ಸಂಘತನೆ ಕಾರ್ಯಕರ್ತರ ಕೆಲಸವೇ ಎಂಬ ಅನುಮಾನ ಮೂಡಿದೆ.