ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಡ್ಯಾಂ ನ 150 ಕ್ರಸ್ಟ್ ಗೇಟ್ ಗಳನ್ನು ಬದಲು ಮಾಡಲಾಗಿದ್ದು, ಹಳೇ ಕ್ರಸ್ಟ್ ಗೇಟ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ.
ಒಟ್ಟು 150 ಕ್ರಸ್ಟ್ ಗೇಟ್ ಗಳನ್ನು ತೂಕದ ಲೆಕ್ಕದಲ್ಲಿ ಮಾರಾಟ ಮಾಡಲು ಯತ್ನ ನಡೆದಿದೆ. 150 ಕ್ರಸ್ಟ್ ಗೇಟ್ ಗಳ ಪೈಕಿ ಒಂದೊಂದು ಗೇಟ್ 650 ಟನ್ ತೂಕವಿದೆ. ಇದೀಗ ಕೆಜಿಗೆ 6 ರೂನಂತೆ 36 ಗೇಟ್ ಗಳನ್ನು 36 ಲಕ್ಷ ರೂಗೆ ಮಾರಾಟ ಮಾಡುವ ಪ್ರಯತ್ನ ಸದ್ದಿಲ್ಲದೇ ನಡೆದಿದೆ. ಈ 36 ಗೇಟ್ ಗಳ ಮೌಲ್ಯ ಸುಮಾರು 3 ಕೋಟಿ ರೂ.ಗಳಷ್ಟಾಗಲಿವೆ.
90 ವರ್ಷಗಳಷ್ಟು ಹಳೇಯ ಗೇಟ್ ಗಳನ್ನು ಮಾರಿ ಕೋಟ್ಯಂತರ ರೂಪಾಯಿ ಹೊಡೆಯುವ ಹಿನ್ನಾರವನ್ನು ಅಧಿಕಾರಿಗಳು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲವೆಡೆ ಡ್ಯಾಂ ಗಳು ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಡ್ಯಾಂ ಗಳ ಕ್ರಸ್ಟ್ ಗೇಟ್ ಗಳನ್ನು ಬದಲಿಸಲಾಗಿದ್ದು, ಹಳೇ ಗೇಟ್ ಗಳನ್ನು ಅಧಿಕಾರಿಗಳು ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ ಎಂಬುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.