alex Certify BIG NEWS: ಕೆ.ಆರ್.ಎಸ್ ಡ್ಯಾಮ್ ಗೇಟ್ ಏಕಾಏಕಿ ಓಪನ್: 2000 ಕ್ಯೂಸೆಕ್ ನೀರು ವ್ಯರ್ಥ; ಅಧಿಕಾರಿಗಳ ನಿರ್ಲಕ್ಷ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆ.ಆರ್.ಎಸ್ ಡ್ಯಾಮ್ ಗೇಟ್ ಏಕಾಏಕಿ ಓಪನ್: 2000 ಕ್ಯೂಸೆಕ್ ನೀರು ವ್ಯರ್ಥ; ಅಧಿಕಾರಿಗಳ ನಿರ್ಲಕ್ಷ ಆರೋಪ

ಮಂಡ್ಯ: ಕೆ.ಆರ್.ಎಸ್ ಡ್ಯಾಂ ನಲ್ಲಿ ಮತ್ತೊಂದು ಅಚಾತುರ್ಯ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯದ ಗೇಟ್ ಏಕಾಏಕಿ ಓಪನ್ ಆಗಿದೆ. ಅಪಾರ ಪ್ರಮಾಣದ ಕಾವೇರಿ ನೀರು ವ್ಯರ್ಥವಾಗಿ ಹರಿದು ಹೋಗಿದೆ.

ಭಾನುವಾರ ರಾತ್ರಿ ಇದ್ದಕ್ಕಿದಂತೆ ಕೆ.ಆರ್.ಎಸ್ ಡ್ಯಾಂ +80 ಗೇಟ್ ಗಳು ತೆರೆದಿದ್ದು 24 ಗಂಟೆಗಳ ಕಾಲ ಬರೋಬ್ಬರಿ 2000 ಕ್ಯೂಸೆಕ್ ನೀರು ವ್ಯರ್ಥವಾಗಿದೆ. ಭಾನುವಾರದಿಂದ ಸೋಮವಾರದವರೆಗೆ ಈ ಅವಾಂತರ ನಡೆದಿದ್ದರು ಅಧಿಕಾರಿಗಳಿಗೆ ಗಮನಕ್ಕೆ ಬಂದಿಲ್ಲ.

ಬಳಿಕ ಸೋನವಾರ ರಾತ್ರಿ ಕಾವೇರಿ ನಿಗಮದ ಅಧಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ. ಜಲಾಶಯದ ಗೆಟ್ ಏಕಾಏಕಿ ತೆರೆಯಲು ಕಾರಣವೇನು? ಅಧಿಕರಿಗಳ ನಿರ್ಲಕ್ಷ್ಯವೇ? ಕಾರಣವೇನೆಂಬುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಗೇಟ್ ನ ಮೋತರ್ ರಿವರ್ಸ್ ಆಗಿ ಗೇಟ್ ತೆರೆದಿರಬಹುದೇ? ಅಥವಾ ಸಿಬ್ಬಂದಿಗಳೇ ಗೇಟ್ ತೆರೆದಿದ್ದಾರೆಯೇ ಎಂದು ಅಧಿಕಾರಿಗಳು ಕೂಡ ಸಂಶಯ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...