ಬೆಂಗಳೂರು; ಕೆ ಆರ್ ಎಸ್ ಸುತ್ತಮುತ್ತ ಕಲ್ಲುಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, 28 ಕಲ್ಲು ಗಣಿಗಾರಿಕೆ ಮಾಲೀಕರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ಕೆ ಆರ್ ಎಸ್ ಸುತ್ತಮುತ್ತಲಿನ ಕಲ್ಲು ಗಣಿಗಾರಿಕೆ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯ ಪಕ್ಷಗಳ ಜಟಾಪಟಿಗೂ ಕಾರಣವಾಗಿತ್ತು. ಇದೇ ವೇಳೆ ಗಣಿಗಾರಿಕೆ ಲೈಸನ್ಸ್ ನ್ನು ರದ್ದು ಮಾಡಿ ಮಂಡ್ಯ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
BREAKING NEWS: ರಾಜ್ಯದಲ್ಲಿಂದು 1,66,006 ಮಂದಿಗೆ ಕೋವಿಡ್ ಪರೀಕ್ಷೆ; 1108 ಜನರಿಗೆ ಸೋಂಕು ದೃಢ
ಕಾನೂನು ಪ್ರಕ್ರಿಯೆ ಪಾಲಿಸದೇ ಗಣಿಕಾರಿಕೆ ಲೈಸನ್ಸ್ ರದ್ದು ಮಾಡಿದ್ದ ಜಿಲ್ಲಾಧಿಕಾರಿ ಆದೇಶವನ್ನು ಇದೀಗ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದೆ. ಕಾನೂನು ಪ್ರಕ್ರಿಯೆ ಪಾಲಿಸಿ ಕ್ರಮ ಕೈಗೊಳ್ಳುವುವಂತೆ ಸೂಚಿಸಿದೆ. ಅಲ್ಲದೇ ಗಣಿ ಮಾಲೀಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿ ಅವರ ವಾದ ಆಲಿಸಿ ನಂತರ ತೀರ್ಮಾನಿಸಲು ಸೂಚಿಸಿದೆ.