
ದಕ್ಷಿಣ ಭಾರತದ ಬೇಡಿಕೆಯ ನಟಿ ಕೃತಿ ಶೆಟ್ಟಿ ಇಂದು 20ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿದ್ದಾರೆ. ಫೋಟೋಶೂಟ್ ಮಾಡಿಸುವ ಮೂಲಕ ತಮ್ಮ ಫೋಟೋಗಳನ್ನು instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
2019 ರಲ್ಲಿ ತೆರೆ ಕಂಡ ‘ಸೂಪರ್ 30’ ಎಂಬ ಹಿಂದಿ ಸಿನಿಮಾ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಕೃತಿ ಶೆಟ್ಟಿ 2021 ರಲ್ಲಿ ‘ಹುಪ್ಪೇನಾ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಕೃತಿ ಶೆಟ್ಟಿಗೆ ಒಂದರ ಮೇಲೊಂದು ಸಿನಿಮಾ ಆಫರ್ ಬಂದವು.
ಕೃತಿ ಶೆಟ್ಟಿ ಇತ್ತೀಚಿಗೆ ಮಲಯಾಳಂನ ‘ಅಜಯಂತಿ ರಾಂಡಮ್ ಮೋಷನ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಅವರ ಸ್ನೇಹಿತರಿಂದ ಹಾಗೂ ಸಿನಿಮಾ ಕಲಾವಿದರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

