ಬೆಂಗಳೂರು: ಕಂದಾಯ ಇಲಾಖೆ ವತಿಯಿಂದ ವಿವಿಧ ಹಂತಗಳಲ್ಲಿ ಆಯೋಜಿಸುವ ಸಭೆ, ಸಮಾರಂಭಗಳಲ್ಲಿ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ಅನುಸರಿಸಬೇಕೆಂದು ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.
ಆಡಂಬರ ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಸಭೆ ಸಮಾರಂಭಗಳನ್ನು ಸರಳವಾಗಿ ನಡೆಸುವುದು. ಅನಗತ್ಯವಾಗಿ ಹಾರ, ನೆನಪಿನ ಕಾಣಿಕೆ ನೀಡದೆ ಅವಶ್ಯವಿದ್ದಲ್ಲಿ ತ್ರಿವರ್ಣ ಖಾದಿ ಹಾರ ಮಾತ್ರ ಬಳಸಬೇಕು ಎಂದು ತಿಳಿಸಲಾಗಿದೆ.
ಸಭೆ ಸಮಾರಂಭಗಳಲ್ಲಿ ಆತಿಥ್ಯಕ್ಕೆ ಔಪಚಾರಿಕತೆಗೆ ಸಮಯ ವ್ಯರ್ಥ ಮಾಡದೆ ಔಪಚಾರಿಕತೆಗೆ ಸಮಯ ಮಿತವಾಗಿರಿಸಿ ಸಭೆ ಸಮಾರಂಭದ ಮೂಲ ವಿಷಯಕ್ಕೆ ಹೆಚ್ಚಿನ ಸಮಯ ಒದಗಿಸಬೇಕು ಎಂದು ಹೇಳಲಾಗಿದೆ.
ಕುಡಿಯುವ ನೀರಿಗೆ ಬಳಸಿ ಬಿಸಾಡುವಂತಹ ಪ್ಲಾಸ್ಟಿಕ್ ಬಾಟಲ್, ಕಪ್ ಗಳನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಮರುಬಳಕೆ ಮಾಡುವ ಬಾಟಲ್, ಕಪ್ ಬಳಸಬೇಕು. ನೀರನ್ನು 20 ಲೀಟರ್ ಕ್ಯಾನ್ ಮೂಲಕ ಖರೀದಿಸಿ ಮರುಬಳಕೆ ಮಾಡುವ ಬಾಟಲ್ ಗಳಲ್ಲಿ ನೀಡಬೇಕು ಎಂದು ಹೇಳಲಾಗಿದೆ.