alex Certify ಬಗರ್ ಹುಕುಂ ಸಾಗುವಳಿ ರೈತರಿಗೆ ಗುಡ್ ನ್ಯೂಸ್: 15 ದಿನಗಳಲ್ಲಿ ಅಕ್ರಮ -ಸಕ್ರಮಕ್ಕೆ ಬಗರ್ ಹುಕುಂ ಸಮಿತಿ, 6 ತಿಂಗಳಲ್ಲಿ ಹಕ್ಕುಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಗರ್ ಹುಕುಂ ಸಾಗುವಳಿ ರೈತರಿಗೆ ಗುಡ್ ನ್ಯೂಸ್: 15 ದಿನಗಳಲ್ಲಿ ಅಕ್ರಮ -ಸಕ್ರಮಕ್ಕೆ ಬಗರ್ ಹುಕುಂ ಸಮಿತಿ, 6 ತಿಂಗಳಲ್ಲಿ ಹಕ್ಕುಪತ್ರ

ಬೆಂಗಳೂರು: ಬಗರ್ ಹುಕುಂ ಸಾಗುವಳಿ ರೈತರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಿಹಿ ಸುದ್ದಿ ನೀಡಿದ್ದಾರೆ.

ಬಗರ್ ಹುಕುಂ ಸಾಗುವಳಿದಾರರು ನಮೂನೆ 50, 53, 57 ರಲ್ಲಿ ಸಲ್ಲಿಸಿದ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಮುಂದಿನ 15 ದಿನಗಳೊಳಗೆ ಅಕ್ರಮ ಸಕ್ರಮಕ್ಕೆ ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳು ರಚನೆಯಾದ 6 ತಿಂಗಳೊಳಗೆ ಎಲ್ಲಾ ಬಾಕಿ ಅರ್ಜಿಗಳ ಇತ್ಯರ್ಥಕ್ಕೆ ಗಡುವು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೇ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಅರ್ಹ ಸಾಗುವಳಿದಾರರಿಗೆ ಡಿಜಿಟಲ್ ಡಾಕ್ಯುಮೆಂಟ್ ಮಾದರಿಯಲ್ಲಿ ಹಕ್ಕುಪತ್ರ- ಸಾಗುವಳಿ ಚೀಟಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...