ದಾವಣಗೆರೆ: ಕೆ.ಆರ್.ಐ.ಡಿ.ಎಲ್ (ಕರ್ನಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ) ನಿಂದ ಬಾಕಿ ಬಿಲ್ ಪಾವತಿಸಿಲ್ಲ ಎಂದು ಆರೋಪಿಸಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಸಂತೆಬೆನ್ನೂರಿನಲ್ಲಿ ನಡೆದಿದೆ.
ಪಿ.ಎಸ್.ಗೌಡರ್ (48) ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ. ಕೆ.ಆರ್.ಐ.ಡಿ.ಎಲ್ ನಿಂದ 2023-24ನೇ ಸಾಲಿನ ಬಾಕಿ ಬಿಲ್ ಪಾವತಿ ಮಾಡಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ.
ಚನ್ನಗಿರಿಯ ಸಂತೇಬೆನ್ನೂರಿನಲ್ಲಿ ವಾಸವಾಗಿದ್ದ ಪಿ.ಎಸ್.ಗೌಡರ್, ಸಂತೇಬೆನ್ನೂರಿನ ಕೃಷಿ ಇಲಾಖೆ ಆವರಣದಲ್ಲಿ 2023-24ರಲ್ಲಿ ನಡೆದ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆ ಮಾಡದೇ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ಸತಾಯಿಸಿದ್ದರು. ಅಲ್ಲದೇ ಇಬ್ಬರು ಸಹೋದರರು ಕೂಡ ಹಣಕಾಸಿನ ವಿಚಾರವಾಗಿ ಮೋಸ ಮಾಡಿದ್ದರು. ಅಧಿಕಾರಿಗಳ ವರ್ತನೆ, ಸಹೋದರರ ಮೋಸದಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ.ಆರ್.ಐ.ಡಿ.ಎಲ್ ನಿಂದ ದೊಡ್ದ ಮೊತ್ತದ ಪರಿಹಾರ ನೀದಬೇಕು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಪತಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪಿ.ಸಿ.ಗೌಡರ್ ಪತ್ನಿ ವಸಂತಕುಮಾರಿ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.