ಬೆಂಗಳೂರು: ವಿಜಯಪುರದ ಬಸವನಬಾಗೇವಾಡಿಯಲ್ಲಿ ಫೆಬ್ರವರಿ 4ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1008 ಮಠಾಧೀಶರ ಪಾದಪೂಜೆಯೊಂದಿಗೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯಾಗಲಿದೆ. ಇದು ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಹಿಂದೂ ಧರ್ಮ ರಕ್ಷಣೆಗೆ ಹಿಂದೂಗಳು ಒಂದಾಗಬೇಕು. ಹಿಂದೂ ಧರ್ಮದ ಒಳಿತಿಗಾಗಿ ಬ್ರಿಗೇಡ್ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಬ್ರಿಗೇಡ್ ಅಧ್ಯಕ್ಷರಾಗಿ ಬಸವರಾಜ ಬಾಳೆಕಾಯಿ, ಕಾರ್ಯಾಧ್ಯಕ್ಷರಾಗಿ ಕೆ.ಇ. ಕಾಂತೇಶ್ ಇರುತ್ತಾರೆ. ನಾನು ಮತ್ತು ಗೂಳಿಹಟ್ಟಿ ಶೇಖರ್ ಬ್ರಿಗೇಡ್ ಸಂಚಾಲಕರಾಗಿರುತ್ತೇವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ವೈಯಕ್ತಿಕ ಬೇಸರವಿಲ್ಲ. ಆದರೆ ವ್ಯವಸ್ಥೆ ಬದಲಾಗಬೇಕು. ಇದು ಯಾವುದೇ ಪಕ್ಷದ ಬ್ರಿಗೇಡ್ ಅಲ್ಲ. ಈಗ ಸಂಘಟನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.