alex Certify ITI, ಡಿಪ್ಲೊಮಾ, ಇಂಜಿನಿಯರಿಂಗ್ ಪದವೀಧರರಿಗೆ KPTCL ನಲ್ಲಿ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ITI, ಡಿಪ್ಲೊಮಾ, ಇಂಜಿನಿಯರಿಂಗ್ ಪದವೀಧರರಿಗೆ KPTCL ನಲ್ಲಿ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲೆಯ ಕುಡುತಿನಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಂಪನಿಯಲ್ಲಿ ಅಪ್ರೆಂಟಿಷಿಪ್ ಕಾಯ್ದೆ 1961ರ ಪ್ರಕಾರ ಇಂಜಿನಿಯರಿಂಗ್‍ನಲ್ಲಿ ಗ್ರಾಜ್ಯುಯೇಟ್, ಡಿಪ್ಲೊಮಾ ಇಂಜಿನಿಯರಿಂಗ್ ಹಾಗೂ ಐಟಿಐ, ಐಟಿಐಯೇತರ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿಶಿಕ್ಷು ವೃತ್ತಿ ಮತ್ತು ಸಂಖ್ಯೆ: ಬಿಇ(ಸಿವಿಲ್)-1, ಬಿಇ(ಮೆಕ್ಯಾನಿಕಲ್)-6, ಬಿಇ(ಇನ್‍ಸ್ಟ್ರುಮೆಂಟೇಶನ್)-2, ಬಿಇ(ಕಂಪ್ಯೂಟರ್ ಸೈನ್ಸ್)-1, ತರಬೇತಿಯ ಅವಧಿ 1 ವರ್ಷವಾಗಿದ್ದು, ಶೈಕ್ಷಣಿಕ ಅರ್ಹತೆ ಬಿಇ ಪದವಿ ಉತ್ತೀರ್ಣರಾಗಿರಬೇಕು ಹಾಗೂ ಮಾಸಿಕ ಶಿಷ್ಯವೇತನ ರೂ.12 ಸಾವಿರ ಆಗಿರುತ್ತದೆ.

ಡಿಪ್ಲೋಮಾ(ಸಿವಿಲ್)-1, ಡಿಪ್ಲೋಮಾ(ಇ&ಇ)-1, ಡಿಪ್ಲೋಮಾ(ಮೆಕ್ಯಾನಿಕಲ್)-1, ಡಿಪ್ಲೋಮಾ(ಕಂಪ್ಯೂಟರ್ ಸೈನ್ಸ್)-1, ಡಿಪ್ಲೋಮಾ(ಕಮರ್ಶಿಯಲ್ ಪ್ರಾಕ್ಟೀಸ್)-1, ತರಬೇತಿಯ ಅವಧಿ 1 ವರ್ಷವಾಗಿದ್ದು, ಶೈಕ್ಷಣಿಕ ಅರ್ಹತೆ ಡಿಪ್ಲೋಮಾ ಉತ್ತೀರ್ಣವಾಗಿರಬೇಕು ಹಾಗೂ ಮಾಸಿಕ ಶಿಷ್ಯವೇತನ 10 ರೂ. ಸಾವಿರ ಇದೆ.

ಐಟಿಐ(ಇಲೆಕ್ಟ್ರೀಷಿಯನ್)-6, ಐಟಿಐ(ಫಿಟ್ಟರ್)-5, ಐಟಿಐ(ಟರ್ನರ್)-2, ಐಟಿಐ(ವೆಲ್ಡರ್)-5, ಐಟಿಐ(ಕೊಪಾ(ಪಾಸಾ)-11, ತರಬೇತಿಯ ಅವಧಿ 1 ವರ್ಷವಾಗಿದ್ದು, ಶೈಕ್ಷಣಿಕ ಅರ್ಹತೆ ಐಟಿಐ ಉತ್ತೀರ್ಣರಾಗಿರಬೇಕು ಹಾಗೂ ಮಾಸಿಕ ಶಿಷ್ಯವೇತನ 10 ಸಾವಿರ ರೂ. ನೀಡಲಾಗುವುದು.

ಎಫ್‍ಒಎ-5(ಎಸ್‍ಎಸ್‍ಎಲ್‍ಸಿ ಮತ್ತು ಕಂಪ್ಯೂಟರ್), ಹೌಸ್ ಕೀಪರ್-17, ತರಬೇತಿ ಅವಧಿ 1 ವರ್ಷವಾಗಿದ್ದು, ಶೈಕ್ಷಣಿಕ ಅರ್ಹತೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು ಹಾಗೂ ಮಾಸಿಕ ಶಿಷ್ಯವೇತನ 7 ಸಾವಿರ ರೂ. ಇದೆ.

ಗ್ರಾಜುಯೇಟ್ ಮತ್ತು ಡಿಪ್ಲೊಮಾ ಇಂಜಿನಿಯರಿಂಗ್ ಶಿಶಿಕ್ಷು ನಿಯಮಗಳು:

ಆನ್‍ಲೈನ್ ಮುಖಾಂತರ ಆಸಕ್ತ ಅಭ್ಯರ್ಥಿಗಳು www.mhrdnats.gov.in ಈ ವೆಬ್‍ಸೈಟ್‍ನಲ್ಲಿ KARNATAKA POWER CORPORATION LIMITED [BTPS] ಎಸ್ಟಾಬ್ಲಿಷ್‍ಮೆಂಟ್ [SKABLS000001] ಗೆ ಜೂ.13 ರೊಳಗೆ ತಮ್ಮ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ಆಯಾ ವೃತ್ತಿಗಳಲ್ಲೇ ಅರ್ಜಿಗಳನ್ನು ಸಲ್ಲಿಸಬೇಕು ಮತ್ತು ಶೈಕ್ಷಣಿಕ ವರ್ಷ 2019 ಮತ್ತು ನಂತರದಲ್ಲಿ ಗ್ರಾಜುಯೇಟ್(ಇಂಜಿನಿಯರಿಂಗ್)/ಡಿಪ್ಲೋಮಾ ಇಂಜಿನಿಯರಿಂಗ್ ಉತ್ತೀರ್ಣ ಹೊಂದಿದ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು.

ಐ.ಟಿ.ಐ/ಎಸ್‍ಎಸ್‍ಎಲ್‍ಸಿ ಶಿಶಿಕ್ಷು ನಿಯಮಗಳು: ಆನ್‍ಲೈನ್ ಮುಖಾಂತರ ಆಸಕ್ತಿ. ಅರ್ಹ ಅಭ್ಯರ್ಥಿಗಳು www.apprenticeshipindia.org [Skill India, NAPS] ಈ ವೆಬ್‍ಸೈಟ್‍ನಲ್ಲಿ BALLARI THERMAL POWER STATION BALLARI [DIST] ಎಸ್ಟಾಬ್ಲಿಷ್‍ಮೆಂಟ್ KUDATHINI [E07162900015] ಗೆ ಜೂ.13ರೊಳಗೆ ತಮ್ಮ ಎಲ್ಲಾ ವಿವರಗಳ ವೃತ್ತಿಗನುಗುಣವಾಗಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನೊಳಗೊಂಡ ದಾಖಲೆಯ ಪ್ರತಿ, ಆಧಾರ್ ಕಾರ್ಡ್ ಪ್ರತಿ, ವಿದ್ಯಾರ್ಹತೆಯ ಅಂಕಪಟ್ಟಿಗಳ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ, ದೈಹಿಕ ಕ್ಷಮತಾ ಪತ್ರ, ಇತ್ತೀಚಿನ 4 ಭಾವಚಿತ್ರಗಳು, ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ವಿವರದ ದಾಖಲೆಯ ಪ್ರತಿ ಸಲ್ಲಿಸಬೇಕು.

ಅನುಸರಿಸಬೇಕಾದ ಇತರ ನಿಯಮಗಳು:

ಅಭ್ಯರ್ಥಿಗಳು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ತಮ್ಮ ಸ್ವಂತ ಇ-ಮೇಲ್ ಐಡಿಯನ್ನು ಮಾತ್ರ ಅರ್ಜಿಯಲ್ಲಿ ಭರ್ತಿ ಮಾಡತಕ್ಕದ್ದು, ತರಬೇತಿಯ ಎಲ್ಲಾ ಪತ್ರ ವ್ಯವಹಾರವನ್ನು ನೀವು ನೀಡಿದಂತಹ ಇ-ಮೇಲ್ ಐಡಿ ಮುಖಾಂತರ ಮಾಡಲಾಗುವುದು, ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಅದರ ಒಂದು ಪ್ರತಿಯನ್ನು ದಾಖಲೆಗಳೊಂದಿಗೆ ಕಚೇರಿಗೆ ಲಕೋಟೆಯ ಮೇಲೆ “ಶಿಶಿಕ್ಷು ತರಬೇತಿಗಾಗಿ ಅರ್ಜಿ” ಎಂದು ನಮೂದಿಸಿ ಸಲ್ಲಿಸಬೇಕು, ಆಫ್‍ಲೈನ್ ಮೂಲಕ ಸಲ್ಲಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ, ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ, ಆನ್‍ಲೈನ್ ಅರ್ಜಿಗಳಲ್ಲಿ ಅಭ್ಯರ್ಥಿಗಳ ಮಾಹಿತಿಯು ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ, ಶಿಶಿಕ್ಷು ತರಬೇತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶಿಶಿಕ್ಷು ಅಧಿನಿಯಮದಂತೆ ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಪ.ಜಾತಿ ಮತ್ತು ಪ.ಪಂಗಡಕ್ಕೆ ಶಿಶಿಕ್ಷು ಕಾಯ್ದೆ ಪ್ರಕಾರ ಮೀಸಲಾತಿ ಇರುತ್ತದೆ. ನಿಗಮದ ಉದ್ಯೋಗಿಗಳ ಮಕ್ಕಳಿಗೆ ಶೇ.25ರಷ್ಟು ಮೀಸಲಾತಿ ಇರುತ್ತದೆ.

ತರಬೇತಿಯ ಅವಧಿ ಮುಗಿದ ನಂತರ ಶಿಶಿಕ್ಷುಗಳನ್ನು ಕೂಡಲೇ ಬಿಡುಗಡೆಗೊಳಿಸಲಾಗುವುದು ಹಾಗೂ ಯಾವುದೇ ಸಂದರ್ಭದ ಶಿಶಿಕ್ಷುಗಳನ್ನು ನಿಗಮದ ಖಾಯಂ ಸೇವೆಗೆ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕೆಪಿಟಿಸಿಎಲ್‍ನ ಉಪ-ಪ್ರಧಾನ ಪ್ರಬಂಧಕರ ಇ-ಮೇಲ್ ವಿಳಾಸ dgmhrdbt@gmail.com  ಹಾಗೂ ಮೊ.9141619835 ಗೆ ಸಂಪರ್ಕಿಸಬಹುದು ಎಂದು ಕೆಪಿಟಿಸಿಎಲ್‍ನ ಉಪ-ಪ್ರಧಾನ ಪ್ರಬಂಧಕರು ತಿಳಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...