
ಬೆಂಗಳೂರು: ವಿದ್ಯುತ್ ಇಲಾಖೆ ಖಾಸಗೀಕರಣದ ವಿಧೇಯಕದ ವಿರುದ್ಧ ಕೆಪಿಟಿಸಿಎಲ್ ನೌಕರರು ಕೈಗೊಂಡಿದ್ದ ಮುಷ್ಕರ ಮುಂದೂಡಲಾಗಿದೆ.
ಆಗಸ್ಟ್ 10 ರಂದು ವಿದ್ಯುತ್ ಕಾಯ್ದೆ ತಿದ್ದುಪಡಿ ವಿಧೇಯಕ 2021 ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕೆಪಿಟಿಸಿಎಲ್ ಕನ್ನಡ ಸಂಘದ ಕಾರ್ಯದರ್ಶಿ ಎ.ಆರ್. ಗೋವಿಂದಸ್ವಾಮಿ ಹೇಳಿದ್ದಾರೆ.
ವಿದ್ಯುತ್ ಇಲಾಖೆ ಖಾಸಗೀಕರಣ ವಿಧೇಯಕ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗುವ ಸೂಚನೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಇವತ್ತು ರಾಜ್ಯದೆಲ್ಲೆಡೆಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ, ಸದ್ಯ ವಿಧೇಯಕ ಮಂಡನೆಯಾಗುವುದಿಲ್ಲ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.