ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಅಧಿಕಾರಿಗಳು ನೌಕರರು ಅಥವಾ ಕುಟುಂಬದ ಸದಸ್ಯರು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದರೆ 15 ಲಕ್ಷ ರೂ. ನೀಡಲಾಗುವುದು. ಹೃದಯ ಮತ್ತು ಶ್ವಾಸಕೋಶ ಎರರೂ ಶಸ್ತ್ರಚಿಕಿತ್ಸೆಗೆ ಒಳಗಾದರೆ ಹೆಚ್ಚುವರಿ ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೆಪಿಟಿಸಿಎಲ್ ನಿಂದ ಈ ಕುರಿತಾಗಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಶ್ವಾಸಕೋಶ ಕಸಿ, ಶ್ವಾಸಕೋಶ ಹೃದಯ ಕಸಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಪ್ಯಾಕೇಜ್ ನಿಗದಿ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶಿಸಿತ್ತು.
ಈ ಆದೇಶದ ಅನ್ವಯ ಕೆಪಿಟಿಸಿಎಲ್ ಅಧಿಕಾರಿಗಳು, ನೌಕರರು ಕುಟುಂಬದ ಸದಸ್ಯರಿಗೆ ಶ್ವಾಸಕೋಶ ಕಸಿಗೆ 15 ಲಕ್ಷ ರೂಪಾಯಿ, ಹೃದಯ ಮತ್ತು ಶ್ವಾಸಕೋಶ ಕಸಿ ಎರಡಕ್ಕೂ ಒಳಗಾದರೆ ಹೃದಯ ಕಸಿಗೆ 15 ಲಕ್ಷ ರೂ. ಶ್ವಾಸಕೋಶ ಕಸಿಯ ಶೇಕಡ 50ರಷ್ಟು ಚಿಕಿತ್ಸಾ ವೆಚ್ಚವನ್ನು ಮರುಪಾವತಿ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.