
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಹೆಚ್ಚುವರಿ ಶಿಕ್ಷಕರ ಹುದ್ದೆ ಆಯ್ಕೆ ಪಟ್ಟಿ ಪ್ರಕಟಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಮಾದರಿ ಶಾಲೆಗಳ ಗ್ರೂಪ್ ಸಿ ವೃಂದದ 200 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಶೇಕಡ 10ರಷ್ಟು ಹೆಚ್ಚುವರಿ ಪಟ್ಟಿ ಮತ್ತು ಕಟ್ ಆಫ್ ಮಾರ್ಕ್ಸ್ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಕನ್ನಡ ಭಾಷಾ ಶಿಕ್ಷಕರು(HK 21), ಆಂಗ್ಲ ಭಾಷೆ ಶಿಕ್ಷಕರು(HK 21), ಉರ್ದು ಭಾಷಾ ಶಿಕ್ಷಕರು(RPC 79), ವಿಜ್ಞಾನ ಶಿಕ್ಷಕರು(RPC 79) ಹುದ್ದೆಗಳ ನೇಮಕಾತಿ ಪಟ್ಟಿಯನ್ನು ಆಯೋಗದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಹೆಚ್ಚುವರಿ ಪಟ್ಟಿಯಲ್ಲಿ ಅರ್ಹರಾದ ಅಭ್ಯರ್ಥಿಗಳಲ್ಲಿ ಆಯ್ಕೆಯಾಗಲು ಇಚ್ಚಿಸದ ಅಭ್ಯರ್ಥಿಗಳು ಮಾತ್ರ ಸೆಪ್ಟೆಂಬರ್ 27ರ ಒಳಗೆ ಯಾವುದಾದರೂ ಮೂಲ ಗುರುತಿನ ಚೀಟಿಯೊಂದಿಗೆ ಆಯೋಗದ ಕಾರ್ಯದರ್ಶಿಗೆ ಖುದ್ದಾಗಿ ಇಲ್ಲವೇ ಲಿಖಿತ ಹೇಳಿಕೆ ಸಲ್ಲಿಸುವಂತೆ ತಿಳಿಸಲಾಗಿದೆ.