ಬೆಂಗಳೂರು: ಉದ್ಯೋಗಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 4000 ಹುದ್ದೆಗಳ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಬಾಕಿ ಉಳಿದ 6 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ವಾಹನ ನಿರೀಕ್ಷಕರು 150, ಬಿಸಿಎಂ ಹಾಸ್ಟೆಲ್ ವಾರ್ಡನ್ 422, ವಸತಿ ಶಾಲೆ ಶಿಕ್ಷಕರು 826, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು 2300, ಸಹಾಯಕ ಇಂಜಿನಿಯರ್ 660, ಫಿಟ್ಟರ್, ಮೆಕ್ಯಾನಿಕ್, ಟರ್ನರ್ 422 ಹುದ್ದೆಗಳು ಸೇರಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿದೆ.